More

    ವಚನ ಸಾಹಿತ್ಯ ಶ್ರೀಮಂತಗೊಳಿಸಿದ ಶರಣರು

    ಕೊಡೇಕಲ್: ನಮ್ಮ ದೇಶದ ಅನೇಕ ಶರಣರು ಮತ್ತು ಸಂತರು ತಮ್ಮ ವಚನಗಳ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ನುಡಿದರು.

    ಶ್ರಾವಣ ಕೊನೇ ಸೋಮವಾರ ಗ್ರಾಮದಲ್ಲಿ ಹಮ್ಮಿಕೊಂಡ ಶ್ರಾವಣ ಸಂಜೆ ಶಿವಾನುಭವ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ದೇಶದ ಕಣ ಕಣದಲ್ಲೂ ದೈವಿಶಕ್ತಿ ಅಡಗಿದೆ ಎಂದರು.

    ನೀರಿನಿಂದ ಸ್ನಾನ ಮಾಡುವವರು ಬಟ್ಟೆ ಮಾತ್ರ ಬದಲಿಸುತ್ತಾರೆ. ಆದರೆ ಬೆವರಿನಿಂದ ಸ್ನಾನ ಮಾಡುವವರು ಇತಿಹಾಸ ಬರೆಯುತ್ತಾರೆ. ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ಸಂಸ್ಕೃತಿ ವಿಶೇಷವಾಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಪಾಶ್ಚಾತ್ಯ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದೆ ಜೀವನ ನಡೆಸುವ ನಮ್ಮ ಜನರು ಸಂಸ್ಕಾರವಂತರು. ಮಕ್ಕಳಿಗೆ ಉತ್ತಮವಾದ ಆಚಾರ, ವಿಚಾರದೊಂದಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.

    ಬಳ್ಳಾರಿ ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಾನವ ದೇವಮಾನವನಾಗಲು ಶಿವಾನುಭವದ ಅವಶ್ಯಕತೆ ಇದೆ. ಕೊಡೇಕಲ್ ಕಾಲಜ್ಞಾನಿ ಬಸವಣ್ಣನವರ ಪವಿತ್ರ ಬೀಡು. ಇಲ್ಲಿನ ಭಕ್ತರಲ್ಲಿ ಭಕ್ತಿ-ಭಾವ, ತನು, ಮನ-ಧನಕ್ಕೆ ಯಾವುದೇ ಕೊರತೆ ಇಲ್ಲ.ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಶ್ರಾವಣ ಮಾಸದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು.

    ಕಾರ್ಯಕ್ರಮವನ್ನು ಶಾಸಕ ಶಾಸಕ ನರಸಿಂಹ ನಾಯಕ ಉದ್ಘಾಟಿಸಿ, ಬಸವಣ್ಣನವರು ನಡೆದಾಡಿದ ಈ ನಮ್ಮ ಭೂಮಿ ಪೂಣ್ಯಭೂಮಿಯಾಗಿದೆ. ಇಲ್ಲಿನ ಆಚಾರ ವಿಚಾರ, ಸಂಪ್ರದಾಯ ತಮ್ಮದೆ ಆದ ವೈಶಿಷ್ಠತೆಯಿಂದ ಕೂಡಿದ್ದು, ಇಲ್ಲಿ ಜನ್ಮತಾಳಿದ ನಾವೇ ಧನ್ಯರು ಎಂದರು.

    ಶಿವಾನುಭವ ಕಾರ್ಯಕ್ರಮದಲ್ಲಿ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ಶಿವಾನುಭವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕೊಡೇಕಲ್ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ, ದೇವಾಪುರದ ಶ್ರೀ ಶಿವಮೂತರ್ಿ ಶಿವಾಚಾರ್ಯ, ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ನೀಲಕಂಠಸ್ವಾಮಿ ವಿರಕ್ತಮಠ, ಶ್ರೀ ರಾಮಲಿಂಗಯ್ಯ ಸ್ವಾಮೀಜಿ, ರಾಣಿ ರಂಗಮ್ಮ ಜಹಾಗೀರದಾರ, ರಾಜಾ ಕುಶಾಲ್ ನಾಯಕ ಜಹಾಗೀರದಾರ, ಹಣಮಂತ ನಾಯಕ, ರಂಗನಾಥ ದೊರೆ, ಶಾಮಸುಂರ ಜೋಶಿ, ವೀರಸಂಗಪ್ಪ ಹಾವೇರಿ, ಕನಕು ಜೀರಾಳ, ಡಾ.ಬಿ.ಎಂ.ಹಳ್ಳಿಕೋಟೆ, ಬಿ.ಎನ್.ಪೊಲೀಸ್ ಪಾಟೀಲ್, ಮೋಹನ ಪಾಟೀಲ್ ಇತರರಿದ್ದರು.

    ಬಸವರಾಜ ಭಂಟನೂರು ಪ್ರಾಥರ್ಿಸಿದರು. ಶಾಮಸುಂದರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಬಸನಗೌಡ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ನಾಗಭೂಷಣ ಸ್ವಾಮಿ ನಿರೂಪಿಸಿದರು, ಭೀಮನಗೌಡ ಬಿರಾದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts