More

    ವಚನ ಸಾಹಿತ್ಯ ರಕ್ಷಿಸಿದ ಮಡಿವಾಳ ಮಾಚಿದೇವರು

    ಬಸವಕಲ್ಯಾಣ: ಕಲ್ಯಾಣ ಕ್ರಾಂತಿಯ ನಂತರ ಖಡ್ಗ ಹಿಡಿದು ವಚನ ಸಾಹಿತ್ಯ ರಕ್ಷಣೆ ಮಾಡಿದ ಕೀತರ್ಿ ವೀರಗಣಾಚಾರಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ಜಗತ್ತಿನ ಅತ್ಯಮೂಲ್ಯವಾದ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅವರ ಕೊಡುಗೆ ದೊಡ್ಡದು ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.

    ಮಡಿವಾಳ ಮಾಚಿದೇವರ ದೇವಸ್ಥಾನ(ಹೊಂಡ) ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ವೀರಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಮಾಚಿದೇವರ ತತ್ವ ದರ್ಶನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ಸ್ಮರಣೋತ್ಸದ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ತಲೆಯ ಮೇಲೆ ವಚನ ಸಾಹಿತ್ಯವನ್ನಿಟ್ಟುಕೊಂಡು ಹೆಜ್ಜೆ ಹಾಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವಚನಗಳನ್ನು ನಿತ್ಯ ಪಠಣ ಮಾಡಬೇಕು. ಲಿಂಗ ಜಾತಿಯ ಸಂಕೇತವಲ್ಲ. ಜ್ಯೋತಿಯ ಸಂಕೇತ. ಅಂತರಾತ್ಮದಲ್ಲಿಯ ಪರಮಾತ್ಮನ ಚೈತನ್ಯವನ್ನು ಬೆಳಗಿಸಿಕೊಳ್ಳಲು ಲಿಂಗ ಪೂಜೆ ಬೇಕು. ಇಷ್ಟಲಿಂಗ ಅರಿವಿನ ಸಂಕೇತವಾಗಿದೆ. ಆತ್ಮದಲ್ಲಿ ಪರಮಾತ್ಮನ ಅರಿವು ಜಾಗೃತಿಗಾಗಿ ಪ್ರತಿಯೊಬ್ಬರೂ ಇಷ್ಟಲಿಂಗ ಪೂಜೆ ಮಾಡಬೇಕಿದೆ ಎಂದರು.

    ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ ಮಾತನಾಡಿ, ಒಗ್ಗಟ್ಟಿನಲ್ಲಿ ಸಮಾಜದ ಪ್ರಗತಿ ಅಡಗಿದೆ. ಸಮಾಜದ ಜನ ಸಂಘಟಿತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವಲ್ಲಿ ಕಾಳಜಿ ವಹಿಸಬೇಕು. ಸಮಾಜದ ಕೆಲಸಗಳಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

    ಸಮಾಜದ ಜಿಲ್ಲಾ ಗೌರವಾಧ್ಯಕ್ಷ ದಿಗಂಬರ ಮಡಿವಾಳ ಮಾತನಾಡಿ, ಸಮಾಜದ ಬೇಡಿಕೆಗೆ ಸಕರ್ಾರ ಸ್ಪಂದಿಸಬೇಕು. ನಗರದ ಹೊರ ವಲಯದಲ್ಲಿ ಧೋಬಿ ಘಾಟ್ ಸ್ಥಳವನ್ನು ಸಮಾಜದ ಹೆಸರಿಗೆ ಮಾಡಬೇಕು ಎಂದರು.

    ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಶರಣು ಸಲಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಭಾವಚಿತ್ರ ಪೂಜೆ ನೆರವೇರಿಸಿದರು. ಬಿಜೆಪಿ ಮುಖಂಡ ಪ್ರದೀಪ ವಾತಡೆ ಷಟಸ್ಥಲ ಧ್ವಜಾರೋಹಣ ಮಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಗಣಪತಿ ಸಸ್ತಾಪುರ ಅಧ್ಯಕ್ಷತೆ ವಹಿಸಿದ್ದರು.

    ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ್ ತನ್ವೀರ್ ಅಹ್ಮದ್, ಜಿಲ್ಲಾ ಗೌರವ ಅಧ್ಯಕ್ಷ ಬಾಬುರಾವ ಮಡಿವಾಳ, ಸಾಯಬಣ್ಣ ಮಡಿವಾಳ, ಬೀದರ್ನ ಸುಭಾಷ ಮಡಿವಾಳ, ಧನರಾಜ ಮಡಿವಾಳ, ಚಿಟಗುಪ್ಪದ ಬಸವರಾಜ ಮಡಿವಾಳ, ಹುಮನಾಬಾದ್ನ ದತ್ತು, ಹುಲಸೂರನ ಜಗನ್ನಾಥ, ಪದಾಧಿಕಾರಿಗಳಾದ ವಿಜಯಕುಮಾರ ಮಡಿವಾಳ, ವಿರಶೆಟ್ಟಿ ಮಡಿವಾಳ, ಜಗನ್ನಾಥ ಮಡಿವಾಳ, ಆಕಾಶ, ರಾಜಕುಮಾರ ಇತರರಿದ್ದರು. ಬಸವರಾಜ ಮಡಿವಾಳ ಸ್ವಾಗತಿಸಿದರು. ಸಂತೋಷ ಮಡಿವಾಳ ನಿರೂಪಣೆ ಮಾಡಿದರು.

    ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮಡಿವಾಳ ಮಾಚಿದೇವರ ದೇವಸ್ಥಾನದ ವರೆಗೆ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts