More

    ವಚನಗಳ ಮೂಲಕ ಸತ್ಯದ ಅನಾವರಣ

    ಸಾಗರ: ಶರಣರು 12ನೇ ಶತಮಾನದಲ್ಲಿ ಸರಳ ಕನ್ನಡದ ಮೂಲಕ ವಚನಗಳನ್ನು ರಚಿಸಿ ಸತ್ಯದ ಅನಾವರಣ ಮಾಡಿ ತೋರಿಸಿದ್ದಾರೆ ಎಂದು ರೋಟರಿ ರಕ್ತನಿಧಿ ಕೇಂದ್ರದ ಅಧ್ಯಕ್ಷ ಡಾ. ಶಿವಕುಮಾರ್ ಹೇಳಿದರು.
    ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಆದರ್ಶಗಳು ನಮ್ಮೊಳಗಿಂದಲೇ ಬರಬೇಕು. ಈ ಜಗತ್ತಿಗೆ ಶ್ರೇಷ್ಠತೆ ಸಾರಿದ ವಚನಗಳು ಸಮಾಜಕ್ಕೆ ದಾರಿದೀಪ. ಇವುಗಳನ್ನು ಪಾಲಿಸುವುದರಿಂದ ಜೀವನ ನೆಮ್ಮದಿಯಿಂದಿರಲು ಸಾಧ್ಯ ಎಂದರು.
    ಉಪನ್ಯಾಸ ನೀಡಿದ ವಿ.ಟಿ.ಸ್ವಾಮಿ, ಸಮಾಜವನ್ನು ಸರಿದಾರಿಗೆ ತರುವಲ್ಲಿ ವಚನಗಳು ಹೆಚ್ಚು ಸಹಕಾರಿ. ಶರಣರ ಪ್ರತಿಯೊಂದು ವಚನಗಳಲ್ಲೂ ಮಾನವೀಯ ಮೌಲ್ಯಗಳಿವೆ. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಎಂದರೇನು ಎನ್ನುವ ಪ್ರಶ್ನೆ ಕಾಡತೊಡಗಿದೆ. ಬೌದ್ಧಿಕ ದಾರ‌್ರಿದ್ಯ ಹೆಚ್ಚಾಗುತ್ತಿದೆ. ಚಿಂತನೆಗಳ ಬದಲು ಚಿಂತೆಗಳೇ ನಿರಂತರವಾಗಿ ಕಾಡತೊಡಗಿವೆ. ಮಾನವೀಯ ಮೌಲ್ಯಗಳಿಲ್ಲದ ಬದುಕು ಶೂನ್ಯ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts