More

    ವಚನಕ್ಕಿದೆ ಸಾಮಾನ್ಯರನ್ನು ಶರಣರನ್ನಾಗಿಸುವ ಶಕ್ತಿ

    ಸವಣೂರ: ಜನಸಾಮಾನ್ಯರನ್ನು ಶರಣರನ್ನಾಗಿಸುವ ಶಕ್ತಿಯನ್ನು ಶರಣರ ವಚನಗಳು ಹೊಂದಿವೆ. ಆದ್ದರಿಂದ ವಚನಗಳ ಸಾರವನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಪಟ್ಟಣದ ಅಡವಿಸ್ವಾಮಿಮಠದ ಶ್ರೀ ಕುಮಾರ ಸ್ವಾಮೀಜಿ ಹೇಳಿದರು.

    ಪಟ್ಟಣದ ಅಡವಿಸ್ವಾಮಿ ಮಠದಲ್ಲಿ ಶರಣ ಸಾಹಿತ್ಯ ಪರಿಷತ್​ನ ಸಂಸ್ಥಾಪನಾ ದಿನ ಹಾಗೂ ಸುತ್ತೂರು ಶ್ರೀಮಠದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜನ್ಮ ದಿನದ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಚನ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಮಕ್ಕಳಲ್ಲಿ ವಚನ ಸಾಹಿತ್ಯದತ್ತ ಆಸಕ್ತಿ ಬೆಳೆಯಲು ಇಂತಹ ಕಾರ್ಯಕ್ರಮ ಅವಶ್ಯವಾಗಿದೆ. ನಿರಂತರ ಮನೆಯಲ್ಲಿ ವಚನ ಬೋಧನೆಯನ್ನು ರೂಢಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

    ಶಿಕ್ಷಕ ಬಸವರಾಜ ಚಳ್ಳಾಳ ಉಪನ್ಯಾಸ ನೀಡಿದರು. ಶಸಾಪ ಸವಣೂರ ಘಟಕ ಅಧ್ಯಕ್ಷ ಡಿ.ಎಫ್. ಬಿಂದಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಸಾಪ ತಾಲೂಕು ಘಟಕ ಅಧ್ಯಕ್ಷ ಪ್ರವೀಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಮಹೇಶ ಸಾಲಿಮಠ, ಪರಶುರಾಮ ಈಳಗೇರ, ಚಿದಾನಂದ ಬಡಿಗೇರ, ಸಿ.ಎನ್. ಲಕ್ಕನಗೌಡ್ರ, ವಿದ್ಯಾಧರ ಕುತನಿ, ರಾಮಣ್ಣ ಅಗಸರ ಇತರರು ಪಾಲ್ಗೊಂಡಿದ್ದರು. ಶಿಕ್ಷಕರಾದ ಸಿ.ಎನ್. ಪಾಟೀಲ, ಸಿ.ವಿ. ಗುತ್ತಲ ಕಾರ್ಯಕ್ರಮ ನಿರ್ವಹಿಸಿದರು.

    ಪ್ರಬಂಧ ಸ್ಪರ್ಧೆ ವಿಜೇತರು: ಹಿರಿಯರ ವಿಭಾಗದಲ್ಲಿ ಚಂದ್ರಶೇಖರ್ ಕುಳೇನೂರು (ಪ್ರಥಮ), ಬಸವರಾಜ ಬಸರೀಕಟ್ಟಿ (ದ್ವೀತಿಯ), ಪುಷ್ಪಾ ಸಾಲಿಮಠ (ತೃತೀಯ), ಕಿರಿಯರ ವಿಭಾಗದಲ್ಲಿ ಕೋಮಲ್ ಹಾಲಬಾವಿ (ಪ್ರಥಮ), ತೇಜಸ್ವಿನಿ ಹಿರೇಮಠ (ದ್ವಿತೀಯ), ಪವಿತ್ರಾ ಚಂದ್ರಗಿರಿ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts