More

    ವಕೀಲರಿಂದ ಸೌಧಕ್ಕೆ ಮುತ್ತಿಗೆ ಯತ್ನ

    ಬೆಳಗಾವಿ: ರಾಜ್ಯದಲ್ಲಿ ವಕೀಲರ ರಣಾ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ವಕೀಲರ ಸಂದಿಂದ ಮಂಗಳವಾರ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ನಗರದಲ್ಲಿನ ಕೋರ್ಟ್​ ಆವರಣದಿಂದ ಪಾದಯಾತ್ರೆ ಮೂಲಕ ಹೊರಟ ವಕೀಲರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು.

    ಮಾರ್ಗದುದ್ದಕ್ಕೂ ಸರ್ಕಾರದ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ವಕೀಲರು ೂಷಣೆ ಕೂಗಿದರು. ನಗರದ ಕರ್ನಾಟಕ ವಕೀಲರ ಪರಿಷತ್​ ಸೇರಿ ವಿವಿಧ ಸಂಟನೆಗಳ ವತಿಯಿಂದ ರಾಷ್ಟ್ರೀಯ ಹೆದ್ದಾರಿ&4 ತಡೆಯುವುದರ ಮೂಲಕ ಸುವರ್ಣ ವಿಧಾನಸೌಧವರೆಗೆ ಸಾವಿರಾರು ವಕೀಲರು ಪ್ರತಿಭಟನೆ ನಡೆಸಿದರು.

    ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಲ್ಲಲ್ಲಿ ವಕೀಲರನ್ನು ತಡೆಹಿಡಿಯಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಸೇರಿದ್ದರಿಂದ ಎರಡೂ ಬದಿಯಿಂದ ವಾಹನಗಳನ್ನು ತಡೆ ಹಿಡಿಯಲಾಯಿತು. ಏಕಾಏಕಿ ವಾಹನ ಸಂಚಾರ ತಡೆಹಿಡಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮೂರು ಗಂಟೆಗೂ ಅಧಿಕ ಕಾಲ ಸುಮಾರು ಹತ್ತು ಕಿಲೋ ಮೀಟರ್​ವರೆಗೆ ಟ್ರಾಪಿಕ್​ ಜಾಮ್​ ಉಂಟಾಯಿತು. ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೇ ವಾಹನಗಳು ನಿಂತವು. ಎರಡೂ ಕಡೆಯಿಂದ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಸುಮಾರು ಎರಡೂವರೆ ತಾಸಿಗೂ ಹೆಚ್ಚು ಹೊತ್ತು ಸಂಚಾರ ದಟ್ಟಣೆ ಏರ್ಪಟ್ಟಿತು. ಪ್ರತಿಭಟನೆ ನಡೆಸುವಾಗ ಕೆಲ ವಕೀಲರು ಪೊಲೀಸರ ಕಣ್ಣು ತಪ್ಪಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

    ಸುವರ್ಣ ವಿಧಾನಸೌಧ ಮುಖ್ಯ ದ್ವಾರದ ಬಳಿ ವಕೀಲರ ದಂಡು ಬರುತ್ತಿದ್ದಂತೆ ಗೇಟ್​ಗಳನ್ನು ಪೊಲೀಸರು ಮುಚ್ಚಿದರು. ಬ್ಯಾರಿಕೇಡ್​ ಹಾಕಿ ತಡೆದರು. ಆದರೂ ಪೊಲೀಸರ ಮನವೊಲಿಕೆಗೂ, ಬಗ್ಗದೇ ಒಳ ನುಗ್ಗಲು ಯತ್ನಿಸಿದರು. ಇನ್ನೂ ಕೆಲ ವಕೀಲರು ಗೇಟ್​ ಮೇಲೆ ಹತ್ತಿ ಸರ್ಕಾರದ ವಿರುದ್ಧ ೂಷಣೆ ಕೂಗಿದರು. ಈ ವೇಳೆ ಬ್ಯಾರಿಕೇಡ್​ ತೆಗೆಯುತ್ತಿದ್ದಾಗ ಪೊಲೀಸರೊಂದಿಗೆ ವಾಗ್ವಾದ ಹಾಗೂ ನೂಕಾಟ ತಳ್ಳಾಟ ನಡೆಯಿತು. ಅಧಿಕಾರಿಗಳು ಹೊರ ಬರಲಾರದೇ ಪರದಾಡಿದರು. ಅಧಿವೇಶನ ಕಣ್ತುಂಬಿಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳೂ ಗೇಟ್​ ಹಾಕಿದ್ದರಿಂದ ನಿರಾಸೆಗೊಂಡರಲ್ಲದೇ, ವಾಪಸ್​ ಹೋಗಲುಪರದಾಡಿದರು. ಸಚಿವ ಮಾಧುಸ್ವಾಮಿ ಅವರು ಕೂಡಲೇ ವಕೀಲರ ರಣಾ ಕಾಯ್ದೆ ಜಾರಿಗೆ ತರಬೇಕು. ವಕೀಲರ ಮೇಲೆ ನಡೆಯುತ್ತಿರುವ ದಬ್ಬಾಳಿಕೆತಡೆಯಬೇಕು ಎಂದು ಆಗ್ರಹಿಸಿ ಸಚಿವ ಮಾಧುಸ್ವಾಮಿ ವಿರುದ್ಧ ೂಷಣೆ ಕೂಗಿದರು. ಗೇಟ್​ ಎದುರು ಕುಳಿತುಕೊಂಡು 40 ಪರ್ಸೆಂಟ್​ ರಾಜ್ಯ ಸರ್ಕಾರ ಎಂದು ಧಿಕ್ಕಾರ ಕೂಗಿದರು. ಕೆಲವರು ರಸ್ತೆ ಮೇಲೆಯೇ ಚಿಲ್ಲರೆ ಹಣ ಸಂಗ್ರಹಿಸಿ ಸರ್ಕಾರಕ್ಕೆ ನಮ್ಮ ಕಡೆಯಿಂದ ಇದು ಭಿೆ ಎಂದು ಹೇಳಿ ಅಣಕು ಪ್ರದರ್ಶನ ನಡೆಸಿದರು. ಸುಮಾರು ಮೂರು ತಾಸು ಗೇಟ್​ ಎದುರು ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ಕಂದಾಯ ಸಚಿವ ಆರ್​.ಅಶೋಕ ಭೇಟಿ ನೀಡಿ, ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಬಾರ್​ ಕೌನ್ಸಿಲ್​ ಅಧ್ಯರು ಹಾಗೂ ಪದಾಧಿಕಾರಿಗಳು ಸುವರ್ಣ ವಿಧಾನಸೌಧಕ್ಕೆ ಬಂದು ವಕೀಲರಿಗೆ ವಿಷಯ ತಿಳಿಸಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts