More

    ವಂದೇ ಭಾರತ್ ಪ್ರಾಯೋಗಿಕ ಸಂಚಾರ- ರೈಲನ್ನು ಕಣ್ತುಂಬಿಕೊಂಡ ದಾವಣಗೆರೆ ಜನ

    ದಾವಣಗೆರೆ: ಕರ್ನಾಟಕದಲ್ಲಿ ಜೂ. 26ರಿಂದ ಧಾರವಾಡ-ಹುಬ್ಬಳ್ಳಿ-ಬೆಂಗಳೂರು ಮಾರ್ಗವಾಗಿ ಓಡಾಟ ಆರಂಭಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ, ಪ್ರಾಯೋಗಿಕ ಸಂಚಾರ ನಡೆಸಿದ್ದು ದಾವಣಗೆರೆಯಲ್ಲಿ ಜನರು ನೂತನ ರೈಲನ್ನು ಕಣ್ತುಂಬಿಕೊಂಡರು.
    ಬೆಂಗಳೂರಿನಿಂದ ಬೆಳಗ್ಗೆ 5.15ಕ್ಕೆ ಹೊರಟ ರೈಲು ದಾವಣಗೆರೆಗೆ ಬೆಳಗ್ಗೆ 9-15ಕ್ಕೆ ತಲುಪಿತು. ನಂತರ ಧಾರವಾಡ ಕಡೆ ಪ್ರಯಾಣ ಬೆಳೆಸಿತು. ನಂತರ ಅಲ್ಲಿಂದ ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತಿತ್ತು.
    ದಾವಣಗೆರೆ ರೈಲು ನಿಲ್ದಾಣದ ಮಧ್ಯ ಹಳಿಯಲ್ಲಿ ಇಂಧನ ತುಂಬಿದ್ದ ಗೂಡ್ಸ್ ರೈಲು, ಇಂಜಿನ್ ಕೆಟ್ಟ್ಟಿದ್ದರಿಂದ ನಿಂತಿತ್ತು. ಇದರಿಂದ ಎರಡನೇ ಫ್ಲಾಟ್‌ಪಾರಂ ಸಂಪರ್ಕ ಸಾಧ್ಯವಾಗದೆ ವಂದೇ ಭಾರತ್ ಹರಿಹರ ಮಾರ್ಗದಲ್ಲಿ ಕೆಲ ಕಾಲ ಸ್ಥಗಿತವಾಗಿತ್ತು.
    ಗೂಡ್ಸ್ ರೈಲಿಗೆ ಮತ್ತೊಂದು ಇಂಜಿನ್ ಜೋಡಿಸಿದ ಬಳಿಕ ವಂದೇಭಾರತ್ ಮಧ್ಯಾಹ್ನ 3-45ಕ್ಕೆ ಎರಡನೇ ಫ್ಲಾಟ್‌ಪಾರಂನಲ್ಲಿ ಪ್ರತ್ಯಕ್ಷವಾಯಿತು. ‘ವಂದೇಭಾರತ್ ಪ್ರಾಯೋಗಿಕ ರೈಲನ್ನು ಯಾವುದೇ ಸಾಮಾನ್ಯ ಪ್ರಯಾಣಿಕರು ಹತ್ತಬಾರದು’ ಎಂದು ರೈಲ್ವೆ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರಕಟಿಸಿದರು.
    ಆದರೆ, ರೈಲಿನ ವಿಶೇಷ ಆಕರ್ಷಣೆ ಗಮನಿಸಿದ ದಾವಣಗೆರೆಯ ಕೆಲವರು ರೈಲು ಭೋಗಿಗಳನ್ನು ಹತ್ತಿ ಅಲ್ಲಿನ ಸೀಟು, ಇತರೆ ವಿಶೇಷತೆಗಳನ್ನು ಕಣ್ತುಂಬಿಕೊಂಡರು. ಮೊಬೈಲ್‌ಗಳಲ್ಲಿ ರೈಲಿನ ಫೋಟೋ ಕ್ಲಿಕ್ಕಿಸಿದರು. ಕೆಲ ಪ್ರಯಾಣಿಕರು ಸೆಲ್ಫೀ ತೆಗೆದುಕೊಂಡರು. ಮತ್ತೆ ಕೆಲವರು ವಿಶಾಲ ಗಾಜಿನಿಂದ ಮುಚ್ಚಲ್ಪಟ್ಟಿದ್ದ ಗಾಜಿನ ಕಿಟಕಿಯಲ್ಲಿ ಕಣ್ಣು ಹಾಯಿಸಿದರು. ಐದು ನಿಮಿಷದ ಬಳಿಕ ರೈಲನ್ನು ಸ್ಥಳೀಯ ಸಿಬ್ಬಂದಿ ಬೀಳ್ಕೊಟ್ಟರು.
    ‘ಬೆಳಗ್ಗೆ ನಿಗದಿಗಿಂತ ಅರ್ಧಗಂಟೆ ಮೊದಲೇ ಎಕ್ಸ್‌ಪ್ರೆಸ್ ರೈಲು ಸಂಚರಿಸಿ, ಅಷ್ಟೇ ವೇಗದಲ್ಲಿ ದಾವಣಗೆರೆಗೆ ತಲುಪಿತ್ತು. ಆರಂಭಿಕ ಹಂತದಲ್ಲಿ ಈ ರೈಲಿನಲ್ಲಿ 8 ಬೋಗಿಗಳಿದ್ದು ಪ್ರತಿ ಬೋಗಿಯಲ್ಲೂ 72 ಪ್ರಯಾಣಿಕರು ಪ್ರಯಾಣಿಸಬಹುದು. ಶೀಘ್ರದಲ್ಲೇ ವೇಳಾಪಟ್ಟಿ ನಿಗದಿಯಾಗಲಿದೆ. ಬೆಂಗಳೂರಿನಿಂದ ದಾವಣಗೆರೆಗೆ 669 ಹಾಗೂ 1372 ರೂ.ಗಳ ನಿರೀಕ್ಷಿತ ಪ್ರಯಾಣ ದರವಿದೆ. ಇದು ಹೆಚ್ಚಲೂಬಹುದು’ ರೈಲ್ವೆ ಸಿಬ್ಬಂದಿಯೊಬ್ಬರು ವಿವರಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts