More

    ಲೋಕ ಅದಾಲತ್‍ನಲ್ಲಿ ಅಗಲಿದ ದಂಪತಿ ಪುನರ್ಮಿಲನ

    ಬಾಗಲಕೋಟೆ: ಕಳೆದ 3 ವರ್ಷಗಳಿಂದ ಅಗಲಿದ ದಂಪತಿಗಳನ್ನು ಪರಸ್ಪರ ಮಾಲೆಯನ್ನು ಹಾಕಿಸುವ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ಮಾರ್ಚ 16 ರಂದು ನಡೆದ ಲೋಕ ಅದಾಲತ್‍ನಲ್ಲಿ ಒಂದು ಮಾಡಲಾಯಿತು.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಜಮಖಂಡಿಯ ಕೊಣ್ಣೂರ ಗ್ರಾಮದ ಸೋಮಪ್ಪ ಮತ್ತು ಸುವರ್ಣ ದಂಪತಿಗಳು ಕಳೆದ 3 ವರ್ಷಗಳಿಂದ ಬೇರೆಯಾಗಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಅವರು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ ಸಂದಭದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸುವರ್ಣ ಪರಲಂಕಿ ಅವರನ್ನು ಮಾತನಾಡಿಸಿದಾಗ ದಂಪತಿಗಳು ದೂರವಾಗಿರುವ ವಿಚಾರ ತಿಳಿದು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ದಂಪತಿಗಳನ್ನು ಒಂದು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿಗಳನ್ನು ಸಹ ರಾಜಿ ಸಂದಾನದ ಮೂಲಕ ಪುನರ್ಮಿಲನ ಮಾಡಲಾಯಿತು. ಜಮಖಂಡಿ ನ್ಯಾಯಾಲಯದಲ್ಲಿ 2, ರಬಕವಿ, ಬೀಳಗಿ, ಬಾದಾಮಿ, ಮುಧೋಳ, ಹುನಗುಂದ ನ್ಯಾಯಾಲಯದಲ್ಲಿ ತಲಾ ಒಂದು ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಜಿಲ್ಲೆ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯ ಸೇರಿ ಒಟ್ಟು 17 ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ 9187 ಪೈಕಿ 6935 ಮತ್ತು ವಾಜ್ಯ ಪೂರ್ವ ಪ್ರಕರಣಗಳಲ್ಲಿ 11693 ಪೈಕಿ 10065 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

    ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2563 ಪ್ರಕರಣಗಳ ಪೈಕಿ 1786, ಬೀಳಗಿ ನ್ಯಾಯಾಲಯದಲ್ಲಿ 480 ಪೈಕಿ 283, ಮುಧೋಳ ನ್ಯಾಯಾಲಯದಲ್ಲಿ 966 ಪೈಕಿ 763, ಬನಹಟ್ಟಿ ನ್ಯಾಯಾಲಯದಲ್ಲಿ 1281 ಪೈಕಿ 1043, ಹುನಗುಂದ ನ್ಯಾಯಾಲಯದಲ್ಲಿ 432 ಪೈಕಿ 286, ಇಲಕಲ್ಲ ನ್ಯಾಯಾಲಯದಲ್ಲಿ 504 ಪೈಕಿ 358 ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ 1125 ಪೈಕಿ 827 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
    ಬ್ಯಾಂಕಿಗೆ ಸಂಬಂಧಿಸಿದಂತೆ 1577 ಪ್ರಕರಣಗಳ ಪೈಕಿ 199 ಇತ್ಯರ್ಥಪಡಿದ್ದು, ಇತ್ಯರ್ಥ ಮೊತ್ತ 3.03 ಕೋಟಿ ರೂ. ಎಂದು ಅಂದಾಲಿಸಲಾಗಿದೆ. ವಿದ್ಯುತ್ ಕಾಯ್ದೆಗೆ ಸಂಬಂಧಿಸಿದ 280 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪ್ರಕರಣದ ಮೊತ್ತ 3.19 ಲಕ್ಷ ಆಗಿರುತ್ತದೆ. ಕಂದಾಯ ಇಲಾಖೆಗೆ ಸಂಬಂಧಿಸಿದ 1147 ಪೈಕಿ 1097 ಇತ್ಯರ್ಥಪಡಿಸಲಾಗಿದೆ. ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 5738 ಪ್ರಕರಣಗಳನ್ನು ಇತ್ಯರ್ಥಗೊಂಡು 13.59 ಲಕ್ಷ ರೂ.ಗಳನ್ನು ಸೆಟೆಲ್‍ಮೆಂಟ್ ಮಾಡಲಾಯಿತು.

    ಲೋಕ ಅದಾಲತ್ ಶಿಬಿರದಲ್ಲಿ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶೆ ಪಲ್ಲವಿ ಆರ್, 1ನೇ ಹೆಚ್ಚುವರಿ ಹಿರಿಯ ನ್ಯಾಯಾದೀಶೆ ಹೇಮಾ ಪಸ್ತಾಪೂರ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಜಿ.ಎ.ಮೂಲಿಮನಿ, ಮುಖ್ಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts