More

    ಲೈಟ್ ಫಿಶಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹ

    ಅಂಕೋಲಾ: ಸಮುದ್ರ ತೀರ ಪ್ರದೇಶಗಳಲ್ಲಿ ಲೈಟ್ ಫಿಶಿಂಗ್ ರಾಜಾರೋಷವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸಾಂಪ್ರದಾಯಿಕ ಮೀನುಗಾರರು ಮತ್ಸ್ಯಕ್ಷಾಮದಿಂದ ಬಳಲುತ್ತಿದ್ದೇವೆ. ಸಂಬಂಧಪಟ್ಟವರು ಕೂಡಲೇ ಲೈಟ್ ಫಿಶಿಂಗ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಂಬಾರ ಖಾರ್ವಿವಾಡದ ಖಾರ್ವಿ ಸಮಾಜ ಯೂನಿಯನ್ ವತಿಯಿಂದ ಗುರುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

    ತಹಸೀಲ್ದಾರ ಮೇಘರಾಜ ನಾಯ್ಕ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಖಾರ್ವಿ ಸಮಾಜ ಯೂನಿಯನ್ ಅಧ್ಯಕ್ಷ ಗಿರಿಧರ ನಾಗೇಶ ಖಾರ್ವಿ, ಕಾರ್ಯದರ್ಶಿ ಸುಂದರ ನಂದಾ ಖಾರ್ವಿ ಸಮಸ್ಯೆ ಕುರಿತು ಮಾತನಾಡಿದರು.

    ಈ ಸಂದರ್ಭದಲ್ಲಿ ಯೂನಿಯನ್ ಸದಸ್ಯರಾದ ಮಾರುತಿ ಖಾರ್ವಿ, ರಾಮ ರಾವುತ, ಧಾಕು ದೇಮು ಖಾರ್ವಿ, ಸಂಜು ಖಾರ್ವಿ, ವಿಠ್ಠಲ ಖಾರ್ವಿ, ನಾಗೇಶ ಖಾರ್ವಿ ಸೇರಿದಂತೆ ನೂರಾರು ಮೀನುಗಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts