More

    ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಸದ್ಧರ್ಮ ಪಾಲಿಸಿ: ಕೋಣಂದೂರು ಬೃಹನ್ಮಠದ ಶ್ರೀ

    ರಿಪ್ಪನ್‌ಪೇಟೆ: ಬಡಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ ಎಂಬ ಕಲ್ಪನೆಯನ್ನು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೊಂದಿದ್ದರು ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಪಟ್ಟಣದ ಹಿಂದು ರಾಷ್ಟ್ರಸೇನಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 116ನೇ ಜನ್ಮದಿನೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಆರ್ಥಿಕವಾಗಿ ಸಬಲರಲ್ಲದ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ದುರ್ಲಬವಾಗಿದ್ದ ಸಂದರ್ಭದಲ್ಲಿ ಶ್ರೀಗಳು ಮಠದಲ್ಲಿ ವಿದ್ಯಾಕೇಂದ್ರ ತೆರೆದು ತನ್ಮೂಲಕ, ಅನ್ನ, ಅಕ್ಷರ ಮತ್ತು ಆರೋಗ್ಯ ನೀಡುವ ಸಂಕಲ್ಪ ಮಾಡಿದರು. ಅದರ ಪ್ರತಿಫಲವಾಗಿ ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಮಠದಿಂದ ಜ್ಞಾನ ಪಡೆದು ದೇಶವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತ ಸಮಾಜದ ಪ್ರಗತಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಶ್ರೀಗಳ ಸದ್ಧರ್ಮವನ್ನು ಪ್ರತಿಯೊಬ್ಬರುವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತೀರ್ಥಹಳ್ಳಿಯ ಡಾ. ಮಂಜುನಾಥ ರಾವ್(ಕಿರಣ್ ಡಾಕ್ಟರ್), ಸರ್ಕಾರಿ ಶಾಲೆ ಮುಖ್ಯಶಿಕ್ಷಕ ತಿಮ್ಮಪ್ಪ, ಮರಣದ ನಂತರ ಅಂಗಾಂಗ ದಾನ ಮಾಡಿದ ಸ್ಮರಣಾರ್ಥ ದಿ. ಬಿ.ಜೆ.ಆರ್ಯನ್, ಆಶಾ ಆರ್.ಜಗನ್ನಾಥ್ ದಂಪತಿಯನ್ನು ಗೌರವಿಸಲಾಯಿತು. ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಶಿವಮಣಿ ಅಕ್ಕ ಅವರು ಸಿದ್ಧಗಂಗಾ ಶ್ರೀಗಳ ಬಗ್ಗೆ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts