More

    ರ‌್ಯಾಂಕ್‌ಗಾಗಿ ಮಕ್ಕಳ ಬೆನ್ನು ಬೀಳಬೇಡಿ; ಅವರಿಷ್ಟದ ಕೇತ್ರದಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಿ

    ಹೊಳೆಹೊನ್ನೂರು: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಬಿಇಒ ಎ.ಕೆ.ನಾಗೇಂದ್ರಪ್ಪ ಹೇಳಿದರು.
    ಸಮೀಪದ ಮಲ್ಲಾಪುರದ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ವಯಲ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
    ಪ್ರೌಢಾವಸ್ಥೆಯ ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯಾಭಿರುಚಿ ಬೆಳೆಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಅವರಿಷ್ಟದ ಕೇತ್ರದಲ್ಲಿ ತೊಡಗಿಕೊಳ್ಳುವಂತೆ ಪಾಲಕರು ಪ್ರೇರೆಪಿಸುವ ಕಾರ್ಯ ಮಾಡಬೇಕಿದೆ. ಪಾಲಕರು, ಶಿಕ್ಷಕರು ಹಾಗೂ ಸಮುದಾಯಗಳ ಸಹಭಾಗಿತ್ವ ಮಕ್ಕಳ ಜ್ಞಾನರ್ಜನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
    ರ‌್ಯಾಂಕ್ ಗಳಿಸುವುದಕ್ಕಾಗಿ ಪಾಲಕರು ಮಕ್ಕಳ ಬೆನ್ನು ಬೀಳದೆ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳಿಗಿರುವ ಆಸಕ್ತಿಯನ್ನು ಗುರುತಿಸಿ ಅದೇ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts