More

    ರೌಡಿಶೀಟ್ ತೆರೆದಿದ್ದಕ್ಕೆ ಹೋರಾಟಗಾರರ ಆಕ್ರೋಶ

    ಬೆಳಗಾವಿ: ಕನ್ನಡಪರ ಇಬ್ಬರು ಹೋರಾಟಗಾರ ವಿರುದ್ಧ ಪೊಲೀಸರು ರೌಡಿಶೀಟ್ ಹಾಕಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಸಭೆ ನಡೆಸಿ, ಖಂಡನಾ ನಿರ್ಣಯ ಕೈಗೊಂಡಿದ್ದಾರೆ.

    ಮಹಾಮೇಳಾವ್ ಆಯೋಜಿಸಿದ್ದ ಎಂಇಎಸ್ ಮುಖಂಡ ದೀಪಕ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದಿದ್ದ ಪ್ರಕರಣ ಹಾಗೂ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಹೋರಾಟದಲ್ಲಿ ಭಾಗವಹಿಸಿದ್ದ ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ಹಾಕಿರುವ ರೌಡಿಶೀಟರ್ ತೆರವುಗೊಳಿಸುವಂತೆ ಒತ್ತಾಯಿಸಿ ಸೋಮವಾರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲು ಸಂಘಟನೆ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸದೆ ಹೋದರೆ ಕಾನೂನಾತ್ಮಕ ಹೋರಾಟ ಆರಂಭಿಸುತ್ತೇವೆ ಎಂದು ಸಭೆ ಮೂಲಕ ಸಂದೇಶ ರವಾನಿಸಿದರು.

    ಕರವೇ ಜಿಲ್ಲಾಧ್ಯಕ್ಷ ದೀಪಕ ಗುಂಡೇನಟ್ಟಿ ಮಾತನಾಡಿ, ಪೊಲೀಸರು ಕನ್ನಡ ಹೋರಾಟಗಾರರ ಮೇಲೆ ಹಾಕಿರುವ ರೌಡಿಶೀಟ್ ತೆಗೆಯಬೇಕು. ಇಲ್ಲದಿದ್ದರೆ ಎಂಇಎಸ್ ಮಹಾಮೇಳಾವ್ ನಡೆಸಿದಾಗ ಕನ್ನಡಿಗರಿಂದ ನಡೆದಿದ್ದ ದೊಡ್ಡ ಪ್ರಮಾಣ ಹೋರಾಟದ ಮಾದರಿಯಲ್ಲೇ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ನಾಡಿನಿಂದ ಎಲ್ಲ ರೀತಿ ಸೌಲಭ್ಯ ಪಡೆದಿರುವ ನಾಡದ್ರೋಹಿಗಳು ನಗರದಲ್ಲಿ ರಾತ್ರೋರಾತ್ರಿ ಕಲ್ಲು ತೂರಿ ಕನ್ನಡಿಗರ ಆಸ್ತಿ-ಪಾಸ್ತಿ ಹಾನಿ ಮಾಡಿದ ಪ್ರಕರಣ ಹಾಗೂ ರಾಯಣ್ಣ ಮೂರ್ತಿ ಭಗ್ನಗೊಳಿಸಿ, ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಂಡಿಲ್ಲ. ನಾಡದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ರೌಡಿಶೀಟ್ ಹಾಕದೆ ಸುಮ್ಮನಿದ್ದು, ಈಗ ಕನ್ನಡಿಗರ ವಿರುದ್ಧ ರೌಡಿಶೀಟರ್ ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ಒತ್ತಾಯಕ್ಕೆ ಮಣಿಯದೆ ಹೋದರೆ, ಸರ್ಕಾರವು ಕನ್ನಡಪರ ಸಂಘಟನೆಗಳ ಹೋರಾಟ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು. ಮಹಾದೇವ ತಳವಾರ, ಶ್ರೀನಿವಾಸ ತಾಳೂರಕರ, ಕಸ್ತೂರಿ ಬಾವೆ, ವಾಜೀದ್ ಹಿರೇಕೋಡಿ, ರಮೇಶ ಯರಗಣ್ಣವರ, ಸಂಪತ್‌ಕುಮಾರ ದೇಸಾಯಿ, ಅನಿಲ ದಡ್ಡಿಮನಿ, ಮಂಜುನಾಥ ರಾಥೋಡ ಇತರರ‌್ದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts