More

    ರೌಡಿಶೀಟರ್ ಹತ್ಯೆ ಪ್ರಕರಣ, 7 ಜನರ ಬಂಧನ

    ಕೆ.ಎಂ.ದೊಡ್ಡಿ; ದೊಡ್ಡರಸಿನಕೆರೆ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ರೌಡಿಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೊಡ್ಡರಸಿನಕೆರೆಯ ದೊಡ್ಡಯ್ಯ(23), ದೇವರಾಜು(24), ಅಭಿಷೇಕ ಗಜ(28), ಪುಟ್ಟಸ್ವಾಮಿಬೆಳ್ಳ(23), ರಾಘವೇಂದ್ರರಾಗೂಳಿ(22), ಚಂದುಋತೀಕ್ ಕುಮಾರ್ (22), ಅರವಿಂದ(22) ಬಂಧಿತ ಆರೋಪಿಗಳು.

    ಖಚಿತ ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನು ಮಂಡ್ಯ ಬಸ್ ನಿಲ್ದಾಣದಲ್ಲಿ ಬಂಧಿಸಿದ ಕೆ.ಎಂ.ದೊಡ್ಡಿ ಪೊಲೀಸರು, ಮೂರು ದಿನಗಳ ಹಿಂದೆ ಇನ್ನುಳಿದ ಮೂವರು ಆರೋಪಿಗಳನ್ನು ಮದ್ದೂರಿನ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದರು. ಇವರನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿದೆ.

    ಅರುಣ್ ಹತ್ಯೆಯಾದ ಸ್ಥಳ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆರೋಪಿಗಳ ಸಮ್ಮುಖದಲ್ಲಿ ಸ್ಥಳದ ಮಹಜರು ನಡೆಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
    ಪೊಲೀಸ್ ಇನ್ಸ್‌ಪೆಕ್ಟರ್ ಶಿವಮಲ್ಲಯ್ಯ, ಭೀಮಪ್ಪ ಎಸ್.ಬಣಾಸಿ ಮತ್ತು ಸಿಬ್ಬಂದಿ ಪ್ರಭುಸ್ವಾಮಿ, ಮೋಹನ್, ವಿಠಲ್ ಕರಿಗಾರ್, ಮಹೇಶ್, ರಾಜಶೇಖರ್, ಸುಬ್ರಮಣಿ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ಮಾರ್ಗದರ್ಶನದಲ್ಲಿ, ಎಎಸ್ಪಿ ವೇಣುಗೋಪಾಲ್ ಡಿವೈಎಸ್ಪಿ ನವೀನ್ ಅವರ ನಿರ್ದೇಶನದ ಮೇರೆಗೆ ತಂಡ ರಚನೆ ಮಾಡಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಶಿವಮಲ್ಲಯ್ಯ ಮಾಧ್ಯಮದವರಿಗೆ ತಿಳಿಸಿದರು. ದೊಡ್ಡರಸಿನಕೆರೆ ಗ್ರಾಮದಲ್ಲಿ ಹಣದ ವಿಚಾರಕ್ಕೆ ನ.20ರಂದು ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹತ್ಯೆ ನಡೆದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts