More

    ರೋಗ ಲಕ್ಷಣ ಕಂಡು ಬಂದರೆ ಮಾಹಿತಿ ಕೊಡಿ


    ಯಾದಗಿರಿ: ದಡಾರ ಹಾಗೂ ರುಬೆಲ್ಲಾ ರೋಗವು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುವ ರೋಗವಾಗಿದ್ದು, ಇದರಿಂದ ಜಿಲ್ಲೆ ಮುಕ್ತಗೊಳಿಸಲು ಆರೋಗ್ಯ ಸೇರಿ ಎಲ್ಲ ಇಲಾಖೆಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.


    ಸೋಮವಾರ ಇಲ್ಲಿನ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಡಾರ ಮತ್ತು ರುಬೆಲ್ಲಾ ರೋಗದ ನಿಮರ್ೂಲನೆ ಹಾಗೂ ತಾಯಿ ಮರಣ ಮತ್ತು ಶಿಶುಮರಣ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ರುಬೆಲ್ಲಾ ರೋಗ ಗಭರ್ಿಣಿಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಗ್ಲುಕೋಮ, ಕಣ್ಣಿನ ಪೊರೆ, ಕಿವುಡುತನ, ಮೆದುಳುಜ್ವರ, ಮಾನಸಿಕ ಅಸ್ವಸ್ಥತೆ, ಬುದ್ದಿಮಾಂದ್ಯತೆ ಮತ್ತು ಹೃದಯ ಸಂಬಂ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ವೈರಾಣುವಿನಿಂದ ಬರುವ ಈ ರೋಗ ಕೆಮ್ಮು ಮತ್ತು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರದಿಂದ ನ್ಯುಮೋನಿಯಾ, ಅತಿಸಾರ ಭೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗೆಯೇ ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷ ಣವಾಗಿದ್ದು, ಇದು ಬರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

    ಅಂಗನವಾಡಿ ಕೇಂದ್ರಗಳಿಗೆ ಬರುವ ಯಾವುದೇ ಮಗುವಿಗೆ ಜ್ವರ, ದದ್ದು ಇನ್ನಿತರ ಲಕ್ಷಣಗಳು ಕಂಡುಬಂದರೆ ಕಾರ್ಯಕತರ್ೆಯರು ಪಕ್ಕದ ಪ್ರಾಥಮಿಕ , ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಬೇಕು.ಹೆರಿಗೆ ಪೂರ್ವ ಮತ್ತು ನಂತರದಲ್ಲಿ ವಿಶೇಷ ಆರೋಗ್ಯ ಕಾಳಜಿ ವಹಿಸಿ ತಾಯಿ ಮರಣ ಪ್ರಮಾಣ ಶೂನ್ಯಆಗಿರುವಂತೆ ನಿಗಾವಹಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ನಿದರ್ೇಶನ ನೀಡಿದರು.

    ಜಿಪಂ ಸಿಇಒ ಗರಿಮಾ ಪನ್ವಾರ, ಪ್ರಭಾರಿ ಡಿಎಚ್ಒ ಡಾ.ಸಂಜೀವಕುಮಾರ ರಾಯಚೂರಕರ್, ಆರ್ಸಿಎಚ್ ಅಕಾರಿ ಡಾ.ಮಲ್ಲಪ್ಪ ಕಣಜಿಕರ್, ಡಾ.ಸಾಜಿದ್, ಡಾ.ಭಗವಂತ ಅನ್ವರ, ತಾಲೂಕು ವೈದ್ಯಾಕಾರಿಗಳಾದ ಡಾ.ಹಣಮಂತರೆಡ್ಡಿ, ಡಾ.ರಮೇಶ ಗುತ್ತೇದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕ ಆರ್.ಎಸ್.ರತ್ನಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts