More

    ರೋಗ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಶ್ರಮಿಸಿ

    ನರಗುಂದ: ಹೆಮ್ಮಾರಿ ಕರೊನಾ ನಿಯಂತ್ರಿಸಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಸಿ. ಕೊರವನವರ ಹೇಳಿದರು.

    ಕರೊನಾ ವೈರಸ್ ನಿಯಂತ್ರಿಸಲು ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮನೆಮನೆ ಸಮೀಕ್ಷೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರ್ವಜನಿಕರು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಬಳಸಬೇಕು. ನಿತ್ಯ ಕೈಗಳನ್ನು ಆಗಾಗ ಶುಚಿಗೊಳಿಸುತ್ತಿರಬೇಕು. ಜ್ವರ, ಕೆಮ್ಮು, ಶೀತ ಮುಂತಾದ ಲಕ್ಷಣಗಳಿರುವ ವ್ಯಕ್ತಿಗಳು ಬಳಸಿದ ಬಟ್ಟೆ, ಆಹಾರ ಪದಾರ್ಥಗಳನ್ನು ಉಪಯೋಗಿಸಬಾರದು. ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.

    ಜಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪಿ.ಕೆ. ಪಾಗಿ, ಜಿ.ವಿ. ಕೊಣ್ಣೂರ, ಎನ್.ಬಿ. ಜೋಶಿ, ಎಂ.ಆರ್. ಕುಲಕರ್ಣಿ, ಬಿ.ಎಂ. ಕೌಜಗೇರಿ, ಶಿವಾನಂದ ಕುರಹಟ್ಟಿ, ಎಂ.ಎಂ. ಮಸೂತಿಮನಿ, ಎಸ್.ಆರ್. ಹಿಪ್ಲಿ, ಎಸ್.ಬಿ. ಹುನ್ನೂರ, ಭುವನೇಶ್ವರಿ ಕೆ. ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಬುಧವಾರ ಸಂತೆ ರದ್ದು: ನರಗುಂದ ಪಟ್ಟಣದಲ್ಲಿ ಬುಧವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ತಾಲೂಕಿನ ವಿವಿಧ ಗ್ರಾಮಸ್ಥರಿಗೆ ತರಕಾರಿ ಹಾಗೂ ವಿವಿಧ ಆಹಾರ ಸಾಮಗ್ರಿ ಸಿಗದೇ ಪರದಾಡಬೇಕಾಯಿತು. ಪ್ರತಿ ಬುಧವಾರಕ್ಕೊಮ್ಮೆ ನಡೆಯುವ ಸಂತೆಗೆ ತಾಲೂಕಿನ 30ಕ್ಕೂ ಅಧಿಕ ಗ್ರಾಮಸ್ಥರು ಆಗಮಿಸುತ್ತಾರೆ. ಆದರೆ, ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಸಂತೆ ರದ್ದುಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts