More

    ರೋಗಿಗಳ ಆರೈಕೆಗೆ 842 ಬೆಡ್ ಮೀಸಲು

    ಹಾವೇರಿ: ಕರೊನಾ ವೈರಸ್​ನ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಜನರು ಬಲಿಯಾಗಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ 3ನೇ ಅಲೆ ನಿಯಂತ್ರಣಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

    ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಒಮಿಕ್ರಾನ್ ಮಾರಿ ಜಿಲ್ಲೆಗೆ ಇನ್ನೂ ಕಾಲಿಟ್ಟಿಲ್ಲ. ಆದರೂ ಅದರ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಜಿಲ್ಲೆಯಲ್ಲಿ ಈಗಿನಿಂದಲೇ ಕೈಗೊಳ್ಳಲಾಗುತ್ತಿದೆ. ಕರೊನಾ 3ನೇ ಎದುರಿಸಲು ಸನ್ನದ್ಧವಾಗಿರುವ ಜಿಲ್ಲಾಡಳಿತ 2ನೇ ಅಲೆಯಲ್ಲಿ ತುರ್ತಾಗಿ ಸಿದ್ಧಗೊಳಿಸಿದ್ದ ಎಲ್ಲ ಬೆಡ್​ಗಳನ್ನು ಇದೀಗ ಸುಸಜ್ಜಿತಗೊಳಿಸಿದೆ. ಬ್ಯಾಡಗಿ ಹೊರತುಪಡಿಸಿದರೆ ಉಳಿದೆಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್​ಗಳು ಆರಂಭಗೊಂಡಿವೆ.

    1 ಜಿಲ್ಲಾಸ್ಪತ್ರೆ ಹಾಗೂ 6 ತಾಲೂಕಾಸ್ಪತ್ರೆ ಸೇರಿ ಎಲ್ಲ ಕಡೆ ಒಟ್ಟು 842 ಬೆಡ್​ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಿದ್ಧಗೊಳಿಸಲಾಗಿದೆ. ಇದರಲ್ಲಿ 778 ಆಕ್ಸಿಜನ್ ಸಹಿತ ಬೆಡ್​ಗಳಿವೆ. ಅದರಲ್ಲಿ ಜಿಲ್ಲಾಸ್ಪತ್ರೆಯಲ್ಲಿ 242, ರಾಣೆಬೆನ್ನೂರ, ಶಿಗ್ಗಾಂವಿ, ಸವಣೂರ, ಹಾನಗಲ್ಲ ತಾಲೂಕಿನಲ್ಲಿ ತಲಾ 100 ಬೆಡ್​ಗಳು ಆಕ್ಸಿಜನ್ ಸೌಲಭ್ಯ ಹೊಂದಿವೆ. ಬ್ಯಾಡಗಿ ಹಾಗೂ ಹಿರೇಕೆರೂರಿನಲ್ಲಿ ತಲಾ 68 ಆಕ್ಸಿಜನ್ ಬೆಡ್​ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 30 ವೆಂಟಿಲೇಟರ್ ಸೌಲಭ್ಯವುಳ್ಳ ಬೆಡ್​ಗಳಿವೆ. ರಾಣೆಬೆನ್ನೂರ ಹಾಗೂ ಶಿಗ್ಗಾಂವಿಯಲ್ಲಿ ತಲಾ 4 ವೆಂಟಿಲೇಟರ್ ಬೆಡ್​ಗಳಿವೆ. ಬ್ಯಾಡಗಿ, ಸವಣೂರ, ಹಿರೇಕೆರೂರ, ಹಾನಗಲ್ಲನಲ್ಲಿ ತಲಾ 3 ವೆಂಟಿಲೇಟರ್ ಬೆಡ್​ಗಳಿವೆ.

    ಜಿಲ್ಲಾಸ್ಪತ್ರೆ ಸೇರಿ ಎಲ್ಲ ಆರು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಗೆ ಆಕ್ಸಿಜನ್ ಪ್ಲಾಂಟ್ ಅಳವಡಿಸಲಾಗಿದೆ. ಬ್ಯಾಡಗಿಯಲ್ಲಿ ಮಾತ್ರ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಬೆಡ್​ಗಳಿಗೆ ಆಕ್ಸಿಜನ್ ಪೈಪ್​ಲೈನ್ ಅಳವಡಿಸಲಾಗಿದ್ದು, ಪ್ಲಾಂಟ್​ನ ವಿದ್ಯುತ್ ಕಾಮಗಾರಿ ಬಾಕಿಯಿದೆ. ಇನ್ನೊಂದು ವಾರದಲ್ಲಿ ಅದು ಸಿದ್ಧಗೊಳ್ಳಲಿದೆ.

    ಕರೊನಾ 2ನೇ ಅಲೆಯಲ್ಲಿ ಹೆಚ್ಚಾಗಿ ಸೋಂಕು ಬಾಧಿತರು ಸಕಾಲದಲ್ಲಿ ಆಕ್ಸಿಜನ್ ಸಿಗದೇ ಮೃತಪಟ್ಟಿದ್ದರು. ಹೀಗಾಗಿ ಎಲ್ಲ ಆಸ್ಪತ್ರೆಗಳ ಬೆಡ್​ಗಳಲ್ಲಿ ಆಕ್ಸಿಜನ್ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರ ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ 85, ಆರು ತಾಲೂಕು ಆಸ್ಪತ್ರೆಗಳಲ್ಲಿ ತಲಾ 40ರಂತೆ 240 ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಸಂಗ್ರಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts