More

    ರೈಲ್ವೆ ವರ್ಕ್​ಶಾಪ್​ಗೆ ಬಂತು ಜೀವಜಲ

    ಹುಬ್ಬಳ್ಳಿ: ಅಭಿವೃದ್ಧಿಗೊಂಡ ದೇವರಗುಡಿಹಾಳ ಕೆರೆಯಿಂದ ನಗರದ ರೈಲ್ವೆ ವರ್ಕ್​ಶಾಪ್, ನಿಲ್ದಾಣ ಹಾಗೂ ಕಾಲನಿಗಳಿಗೆ ನೀರು ಪೂರೈಕೆಗೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಶುಕ್ರವಾರ ಚಾಲನೆ ನೀಡಿದರು. ಭಾರತೀಯ ರೈಲ್ವೆಗೆ ಸೇರಿದ ಅತಿ ದೊಡ್ಡ ಕೆರೆಯಾಗಿದ್ದು, ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಗಿದೆ.

    1,935 ಲೀಟರ್ ನೀರಿನ ಸಾಮರ್ಥ್ಯದ ಈ ಕೆರೆಯನ್ನು 1907ರಲ್ಲಿ ನಿರ್ವಿುಸಲಾಗಿತ್ತು. ಕೆರೆಯ ಮೂರು ದಿಕ್ಕುಗಳಲ್ಲಿ ಗುಡ್ಡಗಳಿವೆ. ಒಟ್ಟು ಕೆರೆಯ ವಿಸ್ತೀರ್ಣ 382 ಎಕರೆ ಇದ್ದು, 278 ಎಕರೆ ವ್ಯಾಪ್ತಿಯಲ್ಲಿ ನೀರು ಇದೆ. 90 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಮರಗಳಿದ್ದು, 599 ಮೀಟರ್ ಉದ್ದದ ಬದುವನ್ನು ಕೆರೆ ಹೊಂದಿದೆ. ಹುಬ್ಬಳ್ಳಿಯಿಂದ 12 ಕಿಮೀ ಹಾಗೂ ಧಾರವಾಡದಿಂದ 32 ಕಿಮೀ ದೂರದಲ್ಲಿ ಕೆರೆ ಇದೆ. ಪೈಪ್​ಗಳು ಒಡೆದಿದ್ದರಿಂದ ಕಳೆದ 7-8 ವರ್ಷಗಳಿಂದ ರೈಲ್ವೆ ಕಾಲನಿ, ನಿಲ್ದಾಣ ಹಾಗೂ ವರ್ಕ್​ಶಾಪ್​ಗೆ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದೀಗ ಪೈಪ್​ಗಳ ದುರಸ್ತಿ, ತಲಾ 2.5 ಲಕ್ಷ ಲೀ. ಸಂಗ್ರಹ ಸಾಮರ್ಥ್ಯದ 2 ಒವರ್​ಹೆಡ್ ಟ್ಯಾಂಕ್​ಗಳ ನಿರ್ವಣ, ಒಬಲಾಪುರ ಪಂಪ್​ಹೌಸ್​ನಲ್ಲಿ ಕೈಗೊಂಡ ವಿವಿಧ ಕಾಮಗಾರಿಯಿಂದಾಗಿ ನೀರು ಪೂರೈಕೆ ಮತ್ತೆ ಪ್ರಾರಂಭಗೊಂಡಿದೆ.

    ದೇವರಗುಡಿಹಾಳದ ಕೆರೆಯಿಂದ ಮರಳಿ ನೀರು ಪೂರೈಕೆ ಪ್ರಾರಂಭಿಸುವ ಸಮಾರಂಭದಲ್ಲಿ ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಪ್ರಧಾನ ಹಣಕಾಸು ಸಲಹೆಗಾರ್ತಿ ರೂಪಾ ಶ್ರೀನಿವಾಸನ್, ನೈಋತ್ಯ ರೈಲ್ವೆ ವಲಯದ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆ ಸುಜಾತಾ ಸಿಂಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts