More

    ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರಿಸಿ

    ಮುಂಡರಗಿ: ಕೃಷಿ ಇಲಾಖೆಯ ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರಿಸುವ ಜತೆಗೆ ಮಾಸಿಕ 10 ಸಾವಿರ ರೂ. ಗೌರವ ಧನ ನೀಡಬೇಕು ಎಂದು ರೈತ ಅನುವುಗಾರರು ಪ್ರಭಾರಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.

    ‘ಮುಂಡರಗಿ ಮತ್ತು ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ 10 ಜನರು ರೈತ ಅನುವುಗಾರರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಈಗಿರುವ ರೈತ ಅನುವುಗಾರರನ್ನು ತೆಗೆದು ಹಾಕಿ ಕಾಯಂ ಹುದ್ದೆ ಸೃಷ್ಟಿಸಿ ಪೂರ್ಣ ಸಂಬಳದೊಂದಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಈವರೆಗೂ ಕಾರ್ಯ ನಿರ್ವಹಿಸಿಕೊಂಡು ಬಂದವರನ್ನೇ ಮುಂದುವರಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ರೈತ ಅನುವುಗಾರರಾದ ಭೀಮಪ್ಪ ಸುಗ್ನಳ್ಳಿ, ಮಂಜುನಾಥ ಗೌಡ್ರ, ಈರಣ್ಣ ಬಳಿಗೇರ, ಪರಮೇಶ್ವರಪ್ಪ ಅಂಕದ, ತಿಮ್ಮಣ್ಣ ರಾಟಿ, ಮಲ್ಲಪ್ಪ ನುಚ್ಚಂಬ್ಲಿ, ಚಿದಾನಂದ ಪರಿಮಳದ, ಅರುಣ ಬಾರಕೇರ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts