More

    ರೈತರ ಮುಖಂಡರಿಂದ ಜಗತ್ನಲ್ಲಿ ಧರಣಿ ಶುರು

    ಕಲಬುರಗಿ: ಕೃಷಿಕರನ್ನು ಬೀದಿ ಪಾಲು ಮಾಡುವ ಕುತಂತ್ರದಿಂದಲೇ ಕೇಂದ್ರ ಸರ್ಕಾರ ಜಾರಿ ತರಲು ಹೊರಟಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳನ್ನು ಹಾಗೂ ರಾಜ್ಯ ಸಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಲು ಆಗ್ರಹಿಸಿ ಮತ್ತು ದೆಹಲಿಯ ರೈತರ ಹೋರಾಟ ಬೆಂಬಲಿಸಿ ನಗರದ ಜಗತ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಮಂಗಳವಾರದಿಂದ ರೈತ ಮುಖಂಡರು ಅನಿರ್ಧಿಷ್ಟ ಧರಣಿ ಆರಂಭಿಸಿದರು.
    ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಧರಣಿ ನಡೆಸಿ ಹೋರಾಟಕ್ಕೆ ಚಾಲನೆ ನೀಡಿದರು. ಈ ಮೂಲಕ ಪ್ರತಿದಿನ ಸರಣಿಯಾಗಿ ಧರಣಿ ನಡೆಸಲಾಗುತ್ತದೆ.
    ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ನಾಯಕಿ ನೀಲಾ ಕೆ. ಮಾತನಾಡಿ, ಕೇಂದ್ರ ಸಕರ್ಾರವು ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ಬೆಂಬಲ ನಿಗದಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರೈತರ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ರೈತ ವಿರೋಧಿಯಾದ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
    ಕೇಂದ್ರ ಸಕರ್ಾರ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ಮತ್ತು ವಿದ್ಯುತ್ ಮಸೂದೆ ಹಾಗೂ ರಾಜ್ಯ ಸಕರ್ಾರ ಭೂ ಸುಧಾರಣೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಬೇಕು. ತೊಗರಿಯ ಬೆಂಬಲ ಬೆಲೆಯನ್ನು 6 ಸಾವಿರದಿಂದ 8 ಸಾವಿರಕ್ಕೆ ಏರಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.
    ಧರಣಿಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಆರ್.ಕೆ.ಹುಡಗಿ, ಅಜರ್ುನ ಭದ್ರೆ, ಅಲ್ತಾಫ್ ಇನಾಮದಾರ, ಚಂದಮ್ಮ ಗೋಳಾ, ಜಾವೇದ್, ಎಸ್.ಬಿ.ಸಜ್ಜನ, ಎಂ.ಬಿ.ಸಜ್ಜನ, ಸುರೇಶ ದೊಡ್ಮನಿ, ಅಮೀನಾಬೇಗಂ, ಕಾಶೀನಾಥ ಸೇರಿ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts