More

    ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

    ಯರಗಟ್ಟಿ: ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ಒದಗಿಸುವುದು ಸರ್ಕಾರದ ಶಿಕ್ಷಣ ನೀತಿ. ಪಾಲಕರು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯವನ್ನು ಹಾಳು ಮಾಡದೇ, ಮಕ್ಕಳನ್ನು ತಪ್ಪದೇ ಶಾಲೆ ಕಳುಹಿಸಬೇಕು ಎಂದು ಶಾಸಕ ಆನಂದ ಮಾಮನಿ ಪಾಲಕರಿಗೆ ಸಲಹೆ ನೀಡಿದರು.

    ಸಮೀಪದ ಸತ್ತಿಗೇರಿ ಹೆಗಡೆ ತೋಟದ ಶಾಲೆಯ ಮರುಪ್ರಾರಂಭೋತ್ಸವ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಮಕ್ಕಳ ಸಂಖ್ಯೆ ಇಲ್ಲದೆ ನಿಂತುಹೋಗಿದ್ದ ಈ ಶಾಲೆಗೆಯಲ್ಲಿ, ಇನ್ನೇಂದು ಮಕ್ಕಳು ಕಡಿಮೆಯಾಗದಂತೆ ಪಾಲಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು. ರೈತರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವುದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು. ಶೀಘ್ರದಲ್ಲಿಯೇ ಇಲ್ಲಿ ಭೋಜನಾಲಯ, ಕುಡಿಯಲು ನೀರಿನ ಸೌಕರ್ಯ, ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ, 2 ಕಿ.ಮೀ ಡಾಂಬರ್ ರಸ್ತೆ, ಬಸ್ ತಂಗುದಾಣ ಸೇರಿದಂತೆ ಎಲ್ಲ ಮೂಲಸೌಲಭ್ಯ ಒದಗಿಸಲಾಗುವುದು. ಈ ಮಕ್ಕಳು ಯಾವುದೇ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಅಲ್ಲದೆ ಇಲ್ಲಿ ವಾಸವಿರುವ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಭೂನ್ಯಾಯ ಮಂಡಳಿ ಸದಸ್ಯ ಬಸನಗೌಡ ಪಾಟೀಲ ಮಾತನಾಡಿ, ಇಲ್ಲಿನ ರೈತ ಕುಟುಂಬದ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಮಹಾದಾಸೆಯಿಂದ ಅಂದು ದಿ. ಚಂದ್ರಶೇಖರ ಮಾಮನಿ ಅವರು ಇಲ್ಲಿ ಶಾಲೆ ಪ್ರಾರಂಭಿಸಿದ್ದರು. ಕಾರಣಾಂತರದಿಂದ ಮಕ್ಕಳ ಕೊರತೆಯಿಂದ ಶಾಲೆ ನಿಂತು ಹೋಗಿತ್ತು. ಶಾಸಕ ಆನಂದ ಮಾಮನಿ ಅವರ ಗಮನಕ್ಕೆ ಬಂದ ತಕ್ಷಣ ಮಕ್ಕಳನ್ನು ಸೇರಿಸಿ ಶಾಲೆಯ ಪುನರ್ ಪ್ರಾರಂಭಕ್ಕೆ ಸಹಕಾರ ನೀಡಿದ್ದಾರೆ. ಶಾಸಕರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇಲ್ಲಿನ ಮಕ್ಕಳು ಶಾಲೆಗಾಗಿ ಬೇರೆಡೆಗೆ ಅಲೆಯುವುದು ತಪ್ಪಿದಂತಾಗಿದೆ ಎಂದರು.

    ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಗ್ರಾಪಂ ಅಧ್ಯಕ್ಷ ಗೌಡಪ್ಪ ಸವದತ್ತಿ, ತಾಪಂ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಪಿಡಿಒ ಮಲ್ಲಪ್ಪ ಹಾರುಗೋಪ್ಪ, ಲಕ್ಷ್ಮಣ ಹೆಗಡೆ, ಬಸವರಾಜ ನಾರಗುಣ್ಣವರ, ಮಲ್ಲಯ್ಯ ಹಿರೇಮಠ, ಎಂ.ಬಿ. ಬಳಿಗಾರ, ಶ್ರೀಕಾಂತಯ್ಯ ನಾಗಿಮಠ, ಎಸ್.ಆರ್. ತೋಟಗಿ, ಎ.ಬಿ. ಪಾಟೀಲ, ಎಂ.ಬಿ. ಸರಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts