More

    ರೈತರ ಪ್ರತಿಭಟನೆ ಬೆಂಬಲಿಸಿ ವಿದುರಾಶ್ವತ್ಥ ಸ್ಮಾರಕದಿಂದ ಆಂಧ್ರದ ಗಡಿಭಾಗದವರೆಗೂ ಪಾದಯಾತ್ರೆ

    ಗೌರಿಬಿದನೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಸಂ ಮತ್ತು ಹಸಿರು ಸೇನೆಯಿಂದ ತಾಲೂಕಿನ ವಿದುರಾಶ್ವತ್ಥ ಸ್ಮಾರಕದಿಂದ ಆಂಧ್ರದ ಗಡಿಭಾಗದವರೆಗೂ ಭಾನುವಾರ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

    ಮೋದಿ ಸರ್ಕಾರದ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಲಿದ್ದು, ಇವುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗ್ಲಿ. ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಎಂ.ಅರ್.ಲಕ್ಷ್ಮೆನಾರಾಯಣ ಎಚ್ಚರಿಕೆ ನೀಡಿದರು.

    ಪ್ರಧಾನಿ ಮೋದಿ ಆಡಳಿತದಲ್ಲಿ ಜನಸಾಮಾನ್ಯರು, ರೈತರು ಹಾಗೂ ಕಾರ್ಮಿಕರ ಬದುಕು ದುಸ್ತರವಾಗಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್, ರಾಜಸ್ಥಾನ ರೈತರು ನಡೆಸುತ್ತಿರುವ ದಹಲಿ ಚಲೋ ಚಳವಳಿಗೆ ನಮ್ಮ ಬೆಂಬಲವಿದ್ದು, ಕಾಯ್ದೆಗಳು ಹಿಂಪಡೆಯದಿದ್ದರೆ ನಾವೂ ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ತಾಲೂಕು ರೈತ ಸಂದ ಅಧ್ಯಕ್ಷ ಗುಂಡಾಪುರ ಲೋಕೇಶ್‌ಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts