More

    ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ

    ಕಲಘಟಗಿ: ರೈತರು ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅವಶ್ಯಕತೆ ಇರುವಷ್ಟು ಮಳೆಯಾಗಿದೆ. ದೇವರ ದಯೆಯಿಂದ ಬೆಳೆ ಚೆನ್ನಾಗಿ ಬಂದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರಲ್ಲಿ ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ಗೊಬ್ಬರವನ್ನು ರೈತರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಅಗತ್ಯದಷ್ಟು ಬೀಜ, ಗೊಬ್ಬರ ದಾಸ್ತಾನಿದೆ. ರೈತರು ಗಡಿಬಿಡಿ ಮಾಡದೆ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬಿತ್ತನೆ ಬೀಜ ಖರೀದಿಸಬೇಕು. ಹೆಚ್ಚು ಖರೀದಿಸಿ ಬೇರೆಯವರಿಗೆ ಮಾರಲು ಮುಂದಾಗಬೇಡಿ. ಇತರ ಕೃಷಿಕರ ಬದುಕು ಹಸನಾಗಿಸಲು ಸಹಕರಿಸಬೇಕು ಎಂದು ಕೋರಿದರು.

    ಗುಣಮಟ್ಟದ ಬಿತ್ತನೆ ಬೀಜ, ಕಳೆ ನಾಶಕಗಳ ವಿತರಣೆ, ಬಳಕೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ತಿಳಿಹೇಳಬೇಕು. ಬಿತ್ತನೆ ಬೀಜಗಳ ಕೊರತೆಯಾಗದಂತೆ ರೈತರ ಬೇಡಿಕೆಯಂತೆ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಫ್. ಕಟ್ಟೇಗೌಡರ ಮಾತನಾಡಿ, ತಾಲೂಕಿನಾದ್ಯಂತ ರೈತರ ಬೇಡಿಕೆಗೆ ತಕ್ಕಂತೆ ಬೀಜ, ಕಳೆ ನಾಶಕ ದಾಸ್ತಾನಿದೆ. ರೈತರು ಆತಂಕ ಪಡುವುದು ಬೇಡ. ಇಂದಿನಿಂದಲೇ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರ, ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳಲ್ಲಿ ಆಯಾ ಭಾಗಗಳ ರೈತರಿಗೆ ವಿತರಿಸಲಾಗುತ್ತಿದೆ ಎಂದರು.

    ಎಪಿಎಂಸಿ ಅಧ್ಯಕ್ಷ ರಜನಿಕಾಂತ ಬಿಜವಾಡ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ನಿಜಗುಣಿ ಕೆಲಗೇರಿ, ಮಾರುತಿ ಹಂಚಿನಮನಿ, ಎನ್.ಕೆ. ಕುಬ್ಯಾಳ, ಶಿವಪುತ್ರಪ್ಪ ಆಲದಕಟ್ಟಿ, ಸಂಗಮೇಶ್ವರ ನಿಂಬಣ್ಣವರ, ಸುನೀಲ ಗಬ್ಬೂರ, ವಿಜಯಕುಮಾರ ಕುಂಕೂರ, ಎಂ.ಬಿ. ಹಳಿಯಾಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts