More

    ರೈತರ ಅನುಕೂಲಕ್ಕೆ ಕಾಲುವೆಗೆ ನೀರು

    ಹುಕ್ಕೇರಿ, ಬೆಳಗಾವಿ: ಮುಂಗಾರು ಹಂಗಾಮಿನ ಬೆಳೆಗಳು, ಜನ ಹಾಗೂ ಜಾನುವಾರುಗಳಿಗೆ ನೀರು ಪೂರೈಸಲು ಹಿಡಕಲ್ ಡ್ಯಾಂನಿಂದ ಚಿಕ್ಕೋಡಿ ಶಾಖಾ ಕಾಲುವೆಗೆ ಅ.13ರ ವರೆಗೆ 250 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.

    ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಣಿ ಹಾಗೂ ಕೋಚರಿ ಏತ ನೀರಾವರಿಯಿಂದ
    ಸಹ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಕಾಲುವೆಗೆ ನೀರು ಹರಿಸಿದ ನಂತರ ಅದು ಕಾಲುವೆಯ ಕೊನೆಯ ರೈತರಿಗೆ ತಲುಪಿದೆಯೊ, ಇಲ್ಲವೋ ಎಂದು ನೀರಾವರಿ ಇಲಾಖೆ
    ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾವಹಿಸುವ ಜತೆಗೆ ರೈತರಿಗೆ ಸಮರ್ಪಕ ನೀರು ಪೂರೈಸಬೇಕು. ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ತಮ್ಮನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

    ತಾಲೂಕಿನ 4 ಕಡೆ ಪಶುಗಳಿಗೆ ಚರ್ಮ ಗಂಟು ರೋಗ ಕಂಡು ಬಂದಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅ.10ರ ನಂತರ ರೋಗ ನಿಯಂತ್ರಿಸಲು ಆಸ್ಪತ್ರೆಗಳಿಗೆ ಔಷಧ ಪೂರೈಕೆಯಾಗಲಿದೆ ಎಂದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಜ್ವಲ ನಿಲಜಗಿ, ದಿಲೀಪ ವಾಳಿಖಿಂಡಿ, ಗುರುರಾಜ ಕುಲಕರ್ಣಿ, ಪಿಂಟು ಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ಶಿವರಾಜ ನಾಯಿಕ, ಭರತೇಶ ನಾಯಿಕ, ಪುಟ್ಟು ಖಾಡೆ, ಸುಹಾಸ ನೂಲಿ, ರೋಹಿತ ಹೆದ್ದೂರಶೆಟ್ಟಿ, ಬಸವರಾಜ ಗಂಗನ್ನವರ, ಇರ್ಫಾನ್ ಮೋಮಿನ್, ಪ್ರಕಾಶ ಪಟ್ಟಣಶೆಟ್ಟಿ, ತಹಸೀಲ್ದಾರ್ ಡಾ. ಡಿ.ಎಚ್.ಹೂಗಾರ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts