More

    ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿ

    ನಂದೇಶ್ವರ: ಭೂಮಿ ಆರೋಗ್ಯ ಕಾಪಾಡಲು ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಕರೆ ನೀಡಿದರು.

    ಸಮೀಪದ ಸತ್ತಿ ಗ್ರಾಮದಲ್ಲಿ ಈಚೆಗೆ ಜರುಗಿದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಧರ್ಮ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಯಾರು ಧರ್ಮ ರಕ್ಷಣೆ ಮಾಡುತ್ತಾರೋ ಅವರ ಕಷ್ಟಕಾಲದಲ್ಲಿ ಧರ್ಮ ಅವರನ್ನು ರಕ್ಷಿಸುತ್ತದೆ ಎಂದರು.

    ನಮ್ಮ ಪಾದಯಾತ್ರೆಯ ಉದ್ದಕ್ಕೂ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದೇವೆ. ಹಲವು ಸಂದೇಶ ಹೊತ್ತು ಸಾಗುತ್ತಿರುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಇತಿಹಾಸ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು. ಬೆಳ್ಳಂಕಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಂಜರಿ ಗುರುಶಾಂತ ಸ್ವಾಮೀಜಿ, ಜೈನಾಪುರದ ಶ್ರೀ, ಸುಗೂರು ಶ್ರೀ, ಕೃಷಿ ತಜ್ಞ ಈರಣ್ಣ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಬಿ.ಆರ್.ಪಾಟೀಲ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ಭಜರಂಗಿ, ಪ್ರಕಾಶ ಭೂಷಣ್ಣವರ, ಜಡೆಪ್ಪ ಕುಂಬಾರ, ಮಲ್ಲಪ್ಪ ಬ್ಯಾಳಗೌಡರ, ಅಶೋಕ ಜಗದೇವ, ಶಂಕರ ಮಟ್ಟೆಪ್ಪನವರ, ಶ್ರೀಶೈಲ ಜಗದೇವ, ಮಲ್ಲಪ್ಪ ಕಂಕಣವಾಡಿ, ಅಪ್ಪಾಸಾಬ ಗಾಳಿ, ಮಲ್ಲಪ್ಪ ಶೇಗುಣಸಿ, ಆನಂದಕುಮಾರ ಪಾಟೀಲ, ಬಸವರಾಜ ದಾನೂಸರ, ಬಸಗೌಡ ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts