More

    ರೈತರು ಕಬ್ಬು ಪೂರೈಸಿ ಸಹಕರಿಸಿ

    ಅಥಣಿ, ಬೆಳಗಾವಿ : ಸ್ಥಳೀಯ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಉಗಾರ, ರೇಣುಕಾ ಹಾಗೂ ಕೆಂಪವಾಡ ಸಕ್ಕರೆ ಕಾರ್ಖಾನೆಗಳು ನೀಡುವ ದರವನ್ನು ತಾವು ನೀಡಲು ಸಿದ್ಧ ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಹೇಳಿದರು. ಇಲ್ಲಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನಾವು ಯಾವುದೇ ಉಪ ಉತ್ಪನ್ನಗಳನ್ನು ಉತ್ಪಾದಿಸದೆ ಕೇವಲ ಕಬ್ಬಿನಿಂದ ಸಕ್ಕರೆ ತಯಾರಿಸಿ ರೈತರಿಗೆ ಯೋಗ್ಯ ದರ ನೀಡುತ್ತಿದ್ದೇವೆ. ರೈತರು ತಮ್ಮ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ಮನವಿ ಮಾಡಿದರು.

    ಸಾನ್ನಿಧ್ಯ ವಹಿಸಿ ಇಂಚಲದ ಡಾ. ಶಿವಾನಂದ ಭಾರತೀ ಸ್ವಾಮೀಜಿ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ, ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಗೂಳಪ್ಪ ಜತ್ತಿ, ಸೌರಭ ಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೊಟಖಿಂಡಿ, ಸಿದ್ದರಾಯ ನಾಯಿಕ, ಸುನಂದಾ ನಾಯಿಕ, ರುಕ್ಮಿಣಿ ಕುಲಕರ್ಣಿ, ಉದ್ಯಮಿ ಮಲ್ಲೇಶ ಸವದಿ, ರೈತ ಮುಖಂಡರಾದ ಶ್ರೀಶೈಲ ನಾಯಿಕ, ಜಡೆಪ್ಪ ಕುಂಬಾರ, .ತಮ್ಮಣ್ಣ ತೇಲಿ ,ಶಿವಾನಂದ ಗೊಲಬಾವಿ, ಬಿ.ಎಂ.ಚೌಗುಲಾ, ಎಸ್.ಕೆ. ಪಡಸಲಗಿ, ದೀಪಕ ದೇಸಾಯಿ, ಸುರೇಶ ಠಕ್ಕಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts