More

    ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಶ್ರಮ

    ಕಮಲಾಪುರ: ಮಳೆಯಿಂದ ಸಂಭವಿಸಿದ ಹಾನಿ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ತಕ್ಷಣ ಸರ್ಕಾರದಿಂದ ಅಗತ್ಯ ಪರಿಹಾರ ಕಲ್ಪಿಸಲು ಶ್ರಮಿಸುವೆ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.
    ಮಹಾಗಾಂವ್ ಸಮೀಪದ ಗಂಡೋರಿ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿದ ಅವರು, ಗಂಡೋರಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ತಂದಿದೆ. ಗಂಡೋರಿ ಈ ಭಾಗದ ಪ್ರಮುಖ ಜಲಾಶಯವಾಗಿದ್ದು, ಇಡೀ ಕ್ಷೇತ್ರಕ್ಕೆ ನೀರುಣಿಸಲಿದೆ ಎಂದರು.
    ರೈತರ ಜಮೀನೊಂದರಲ್ಲಿ ಸ್ವಯಂ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸಿದರು.
    ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುಭಾಷ ಬಿರಾದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಪ್ರಮುಖರಾದ ರವಿ ಬಿರಾದಾರ, ಶಿವಕುಮಾರ ಪಸಾರ, ಸುಜಿತ ಬಿರಾದಾರ, ಜಗನ್ನಾಥ ಮಾಲಿಪಾಟೀಲ್, ರೇವಣಸಿದ್ದಪ್ಪ ಮೂಲಗೆ, ಜಗನ್ನಾಥ ಹರಸೂರ, ವೀರೇಶ ಬಿರಾದಾರ, ವೆಂಕಟೇಶ ಅಧೋನಿ, ಸತೀಶ ಸೊರಡೆ, ಶಶಿಧರ ಮಾಕಾ, ಸಂತೋಷ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts