More

    ರೈತರಿಗೆ ಶೇ.10 ಹೆಚ್ಚುವರಿ ಸಾಲ

    ಬೀದರ್: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ನಿಂದ ಅಲ್ಪಾವಧಿ ಬೆಳೆ ಸಾಲ ಪಡೆದವರಿಗೆ ಶೇ.10 ಹೆಚ್ಚುವರಿ ಬೆಳೆ ಸಾಲ ವಿತರಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.
    ಕರೊನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮು ಸಿದ್ಧತೆ ನಿಟ್ಟಿನಲ್ಲಿ ರೈತರಿಗೆ ಹೆಚ್ಚುವರಿ ಸಾಲ ವಿತರಿಸಲಾಗುತ್ತಿದೆ. ಜಿಲ್ಲೆಯ 1,54,864 ರೈತರಿಗೆ ಹೆಚ್ಚುವರಿ ಬೆಳೆ ಸಾಲಕ್ಕೆ 124.53 ಕೋಟಿ ರೂ. ಬೇಕು. ಬ್ಯಾಂಕ್ ಮೇಲೆ ಹೊರೆಯಾದರೂ ಕಷ್ಟದ ಪರಿಸ್ಥಿತಿ ಅರಿತು ರೈತರ ನೆರವಿಗಾಗಿ ಈ ತೀಮರ್ಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಜಿಲ್ಲೆಯ 171 ಪ್ಯಾಕ್ಸ್ (ಪಿಕೆಪಿಎಸ್) ಮೂಲಕ ಮಂಗಳವಾರದಿಂದಲೇ ರೈತರಿಗೆ ಸಾಲ ವಿತರಿಸಲಾಗುವುದು. ಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ದಿವಂಗತ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಎಂದಿಗೂ ಹೇಳುತ್ತಿದ್ದರು. ಅವರ ಕನಸು ಈಡೇರಿಸಲು ಬ್ಯಾಂಕ್ ಹೆಚ್ಚುವರಿ ಸಾಲ ವಿತರಣೆಗೆ ಮುಂದಾಗಿದೆ. ಕೃಷಿ ಚಟುವಟಿಕೆ ಆರಂಭಿಸಲು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
    ರೈತರು ಸಂಬಂಧಿಸಿದ ಪ್ಯಾಕ್ಸ್ಗಳಿಗೆ ಭೇಟಿ ನೀಡಿ ತಮ್ಮ ಸಾಲದ ಕುರಿತು ಚರ್ಚಿಸಿ ಹೆಚ್ಚುವರಿ ಸಾಲ ಪಡೆಯಬೇಕು. ಈ ಸಾಲ ವಿತರಿಸಲು ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಯೋಜನೆ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಪ್ಯಾಕ್ಸ್ಗಳು ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts