More

    ರೈತರಿಗೆ ಮಂಜೂರಾದ ಜಾಗದಲ್ಲಿ ವಸತಿ ಶಾಲೆ ಬೇಡ; ಹಿರೇಶಕುನ ನಿವಾಸಿಗಳ ಆಗ್ರಹ

    ಸೊರಬ: ಪುರಸಭೆ ವ್ಯಾಪ್ತಿಯ ಹಿರೇಶಕುನ ಸರ್ವೇ ನಂ.113ರಲ್ಲಿ ರೈತರಿಗೆ ಮಂಜೂರಾದ ಭೂಮಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ಸ್ಥಾಪಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಬುಧವಾರ ನಾಗರಿಕರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
    ಮುಖಂಡ ಜೆ.ಮಂಜಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ಹಿರೇಶಕುನದ ಸರ್ವೇ ನಂ.113ರಲ್ಲಿ 37 ಕುಟುಂಬಗಳಿಗೆ ಒಟ್ಟು 58.16 ಎಕರೆ ಭೂ ಮಂಜೂರಾತಿ ದೊರೆತು ರೈತರ ಹೆಸರಿಗೆ ಖಾತೆ, ಪಹಣಿ ನೀಡಲಾಗಿದೆ. ಆದರೆ ಈಗ ರೈತರ ಭೂ ಮಂಜೂರಾತಿಯನ್ನು ಸಾಗರ ಉಪವಿಭಾಗಾಧಿಕಾರಿಗಳು ರದ್ದುಪಡಿಸಿ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಾಗರ ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು ಸದರಿ ಭೂಮಿಯಲ್ಲಿ ಹಲವಾರು ವರ್ಷಗಳಿಂದ ರೈತರು ಅಡಕೆ, ಬಾಳೆ, ಶುಂಠಿ ಮುಂತಾದ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಸದರಿ ಜಮೀನಿನ ಮೇಲೆ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿದೆ. ಈಗಾಗಲೇ ಕಂದಾಯ, ಭೂ ಮಾಪನ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ನಿರ್ಮಾಣಕ್ಕೆ 20 ಎಕರೆ ಜಾಗವನ್ನು ಗುರುತುಪಡಿಸಿ ಸರ್ವೇ ಕಾರ್ಯಕ್ಕೆ ಮುಂದಾಗಿರುವುದನ್ನು ಗ್ರಾಮಸ್ಥರು ಒಗ್ಗೂಡಿ ತಡೆಹಿಡಿಯಲಾಗಿದೆ. ಸದರಿ ಭೂಮಿಯ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅಂತಿಮ ಆದೇಶ ಬರುವವರೆಗೂ ರೈತರ ಭೂ ಸಾಗುವಳಿ ಮಂಜೂರಾತಿ ಜಮೀನನ್ನು ಇತರ ಉದ್ದೇಶಗಳಿಗೆ ಬಳಸಬಾರದು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts