More

    ರೈತರಿಗಾಗಿ ವಾರ್ ರೂಂ ರಚನೆ: ಸಚಿವ ಚವಾಣ್

    ವಿಜಯಪುರ: ಪಶು ವೈದ್ಯರು ಹಳ್ಳಿಗಳಿಗೆ ಹೋಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದಲ್ಲದೇ ರೈತರಿಗಾಗಿ ವಾರ್ ರೂಂ ರಚಿಸುವುದಾಗಿ ವಕ್ಫ್ ಮತ್ತು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಿಳಿಸಿದರು.

    ಪಶು ಆರೋಗ್ಯದಲ್ಲಿ ವ್ಯತ್ಯಾಸವಾದರೂ ರೈತರು ವಾರ್ ರೂಂಗೆ ಕರೆ ಮಾಡಿದರೆ ಸಾಕು ವೈದ್ಯರು ರೈತರನ್ನು ಸಂಪರ್ಕಿಸಿ ಪಶುಗಳಿಗೆ ಚಿಕಿತ್ಸೆ ನೀಡುವರು. ಅಲ್ಲದೇ, ರಾಜ್ಯದಲ್ಲಿ 73 ಕೋಟಿ ಜಾನುವಾರು, 6 ಕೋಟಿ ಕೋಳಿಗಳಿವೆ. 15 ಜಿಲ್ಲೆಗಳಲ್ಲಿ ಪಶು ಸಂಜೀವಿನಿ 1962ಗೆ ಚಾಲನೆ ಕೊಟ್ಟಿದ್ದು ಎಲ್ಲ ಕಡೆ ಸಿಬ್ಬಂದಿ ಹೋಗುತ್ತಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್‌ನಲ್ಲಿ ಪಶು ಮೇಳ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದ್ದು ಸಿಎಂ ಯಡಿಯೂರಪ್ಪ ಅವರೇ ಚಾಲನೆ ನೀಡಿದರು. ಕರೊನಾದಂಥ ಸಂಕಷ್ಟದ ಸಮಯದಲ್ಲೂ ಪಶು ಇಲಾಖೆಗೆ ಅನುದಾನ ನೀಡಲಾಗಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಒಂದೇ ದಿನ 30 ಸಸಿ ನೆಡಲಾಗಿದೆ. ಪಶು ಪಾಲನೆ ಭವನ ಉದ್ಘಾಟಿಸಿದ್ದಾಗಿ ವಿವರಿಸಿದರು.

    ಗೋಹತ್ಯೆ ನಿಷೇಧ ಕಾಯ್ದೆ:
    ಕರೊನಾ ಹಿನ್ನೆಲೆ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಟಾನಗೊಂಡಿಲ್ಲ. ಮುಂದಿನ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಾಡೇ ಮಾಡುತ್ತೇವೆ. ಗೋಮಾತಾ ನಮ್ಮ ಮಾತಾ ಆಗಿದ್ದು ಅದರ ರಕ್ಷಣೆಗೆ ನಾವು ಬದ್ಧರಿದ್ದೇವೆ ಎಂದರು.

    ದೀಪಾವಳಿ ಆಫರ್:
    ಸಿಎಂ ಯಡಿಯೂರಪ್ಪ ಅವರು ಮರಾಠಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು 50 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಇದೀಗ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಆ ಮೂಲಕ ದೀಪಾವಳಿ ಬಂಪರ್ ಆಫರ್ ನೀಡಿದ್ದಾರೆ. ಸಾಮಾಜಿಕ ನ್ಯಾಯ ಕಾಪಾಡುತ್ತಿರುವ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಚವಾಣ್ ತಿಳಿಸಿದರು.
    ಇನ್ನು ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts