More

    ರೈತಪರ ಕಾರ್ಯಗಳಿಗೆ ಪಕ್ಷಾತೀತ ಬೆಂಬಲ

    ಹೊಳೆಆಲೂರ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಬಾಂಧವ್ಯ ಹಾಳು ಮಾಡುವುದಲ್ಲದೆ, ಮುಂದೊಂದು ದಿನ ಎಪಿಎಂಸಿಗಳನ್ನು ಮುಚ್ಚುವ ಸಂಭವ ಎದುರಾಗಲಿದೆ. ಹೀಗಾಗಿ ರೈತರು ಮತ್ತು ವ್ಯಾಪಾರಸ್ಥರು ಪಕ್ಷಾತೀತ ಹಾಗೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ ಹೇಳಿದರು.

    ದಿ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಗ್ರಾಮದ ಎಪಿಎಂಸಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ನೂತನ ಅಧ್ಯಕ್ಷ ರಾಜಣ್ಣ ಹೂಲಿ ಹಾಗೂ ಉಪಾಧ್ಯಕ್ಷ ಶಿವಾನಂದ ಅರಹುಣಸಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ 20 ತಿಂಗಳ ಅವಧಿಯಲ್ಲಿ ಸಿ.ಸಿ. ರಸ್ತೆ, ಕುಡಿಯುವ ನೀರು, ತೂಕದ ಯಂತ್ರ ಸೇರಿ ಮೂಲ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ರೈತರ ಪರವಾಗಿ ಕೈಗೊಳ್ಳುವ ಕೆಲಸಗಳಿಗೆ ಪಕ್ಷಾತೀತವಾಗಿ ಬೆಂಬಲಿಸಲಾಗುವುದು ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಜಣ್ಣ ಹೂಲಿ, ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ. ಹೊಳೆಆಲೂರ ಎಪಿಎಂಸಿಗೆ ಆದಾಯ ಮೂಲಗಳನ್ನು ಸಂಗ್ರಹಿಸಲು ನೂತನ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

    ಮರ್ಚಂಟ್ಸ್ ಸಂಸ್ಥೆಯ ಅಧ್ಯಕ್ಷ ಎನ್.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಬಿ. ನಾಗಲಾಪೂರ, ಕೆ.ಸಿ. ಪಾಟೀಲ, ಎಸ್.ಜಿ. ತೋಟದ, ಶಿವಣ್ಣ ಯಾವಗಲ್ಲ, ಸಿ.ಬಿ. ಪಾಟೀಲ, ಎಸ್.ಎಲ್. ಗದಗ, ವೀರಣ್ಣ ಯಾವಗಲ್ಲ, ರುದ್ರಗೌಡ್ರ ಪರಸನಗೌಡ್ರ, ಪರಶುರಾಮ ಸಂಗಟಿ, ಹಮಾಲರ ಸಂಘದ ಪದಾಧಿಕಾರಿಗಳು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts