More

    ರೇಖೆಗಳಲ್ಲಿ ಅರಳಿದ ಕರೊನಾ ಜಾಗೃತಿ

    ಧಾರವಾಡ: ಸರ್ಕಾರ ಕರೊನಾ ನಿಯಂತ್ರಣಕ್ಕೆ ಅನೇಕ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ವೈರಸ್ ನಿಯಂತ್ರಣ ಜಾಗೃತಿಗೆ ಕಾರ್ಟೂನ್ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

    ಜಿಲ್ಲಾಡಳಿತದ ಈ ವಿನೂತನ ಪ್ರಯತ್ನಕ್ಕೆ ಗಳಗಿಹುಲಕೊಪ್ಪ ಪ್ರೌಢಶಾಲಾ ಶಿಕ್ಷಕ, ಕಲಾವಿದ ಸಂಜೀವ ಕಾಳೆ ತಮ್ಮ ಕಲಾ ಕುಂಚದಲ್ಲಿ ವೈವಿಧ್ಯಮಯ ವ್ಯಂಗ್ಯ ಚಿತ್ರಗಳನ್ನು ಅರಳಿಸಿ ಜನರ ಭಾವನೆಗಳನ್ನು ತಲುಪಲು ಸಹಕಾರಿಯಾಗಿದ್ದಾರೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಡಾ.ಬಿ.ಸಿ. ಸತೀಶ ಮಾರ್ಗದರ್ಶನದಲ್ಲಿ ಕಾರ್ಟೂನ್ ಮೂಲಕ ಕರೊನಾ ವೈರಸ್ ಕುರಿತು ವಿಶೇಷ ಜಾಗೃತಿ ಮೂಡಿಸಿದ್ದಾರೆ.

    ದಿನೇ ದಿನೆ ಹೆಚ್ಚಳವಾಗುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಕುರಿತು ಗಮನ ಸೆಳೆಯಲು, ವ್ಯಕ್ತಿಯೊಬ್ಬ ಮನೆಯೊಳಗಿಂದ ಹೊರಗೆ ಇಣುಕಿ ನೋಡಿದಾಗ ಕರೊನಾ ವೈರಾಣುಗಳು ಮನೆ ಬಾಗಿಲು, ಹೂಕುಂಡ, ಗೋಡೆಗಳ ಬಳಿ ಅವಿತುಕೊಂಡು ‘ಏ ಬಾರೋ ಹೊರಗೆ. ಎಂಟ ದಿನಾ ಆತು ಯಾರೂ ಸಿಕಿದ್ದಿಲ್ಲ. ಏ ಸುಮ್ಮನಿರೋ ನಿನ್ನ ಕಾಯಾಕತ್ತಿದ್ದೆ. ಬಂದು ಚಲೋ ಮಾಡಿದಿ’ ಎಂದು ಅಟ್ಟಹಾಸದಿಂದ ದಾಳಿಗೆ ಕಾಯುತ್ತಿರುವ ವ್ಯಂಗ್ಯ ಚಿತ್ರ ಜನರನ್ನು ಆಕರ್ಷಿಸುತ್ತದೆ.

    ಇನ್ನೊಂದು ಚಿತ್ರದಲ್ಲಿ ಬೈಕ್ ಮೇಲೆ ಹೊರಟ ಯುವಕನ ಮೇಲೆ ಯಮನ ರೂಪದಲ್ಲಿ ಬಂದ ಕರೊನಾ ಯುವಕನ ಕುತ್ತಿಗೆಗೆ ಹಗ್ಗ ಎಸೆಯುವ ದೃಶ್ಯ ಮೂಡಿಸಲಾಗಿದೆ. ಆಗ ಗಾಬರಿಗೊಂಡ ಯುವಕ, ‘ಯಪ್ಪಾ ತಪ್ಪಾತೋ’ ಎಂದು ಪಲಾಯನ ಮಾಡಲು ಪ್ರಯತ್ನಿಸುವಾಗ ವೈರಾಣುವನ್ನು ಹೊತ್ತೊಯ್ಯುತ್ತಿರುವ ವಾಹನ ಕೋಣವು ಇವನಗಿಂತ ಯಮರಾಜಾ ಚಲೋ ಇದ್ದ. ಸ್ವಲ್ಪ ವಿಶ್ರಾಂತಿ ಸಿಗುತ್ತಿತ್ತು’ ಎನ್ನುವ ಸಂಭಾಷಣೆ ಒಳಗೊಂಡಿದೆ.

    ಹೀಗೆ 10ಕ್ಕೂ ಹೆಚ್ಚು ವ್ಯಂಗ್ಯ ಚಿತ್ರಗಳನ್ನು ಅರಳಿಸಿರುವ ಸಂಜೀವ ಕಾಳೆ ಅವರ ಪ್ರಯತ್ನ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts