More

    ರುಚಿ ಇರಲಿ, ಆರೋಗ್ಯಯುತವೂ ಆಗಿರಲಿ – ಎವಿಕೆ ಕಾಲೇಜಲ್ಲಿ ಆಹಾರ ಮೇಳ

    ದಾವಣಗೆರೆ: ಆಹಾರ ಕೇವಲ ನಾಲಿಗೆ ರುಚಿಗೆ ಸೀಮಿತವಾಗಿದ್ದರೆ ಸಾಲದು, ಜತೆಗೆ ಆರೋಗ್ಯಕರವಾಗಿಯೂ ಇರಬೇಕು ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
    ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಆಹಾರ ಒಂದು ವಿಜ್ಞಾನವಿದ್ದಂತೆ. ಇದು ರುಚಿಕರ, ಆರೋಗ್ಯಕರ ಹಾಗೂ ಪುಷ್ಠಿಕರವಾಗಿರಬೇಕು. ಕಾಲೇಜಿನಲ್ಲಿರುವ ಗೃಹ ವಿಜ್ಞಾನ ಎಂಬ ಪಠ್ಯವೇ ಇದ್ದು, ಮುಂದೆ ವೃತ್ತಿ ರೂಪದಲ್ಲೂ ಸಹಾಯವಾಗಬಹುದು ಎಂದು ತಿಳಿಸಿದರು.
    ಪ್ರತಿದಿನ ತರಗತಿಯಲ್ಲಿ ಈ ಬಗ್ಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಉತ್ಸಾಹದಿಂದ ಮೇಳದಲ್ಲಿ ಭಾಗವಹಿಸಿ ಹೊಸ ಆಹಾರ ಪದಾರ್ಥ ತಯಾರಿಸಿ ಗಮನ ಸೆಳೆದಿದ್ದಾರೆ ಎಂದು ಶ್ಲಾಘಿಸಿದರು.
    ಬಾಪೂಜಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ದೇಶ ವಿದೇಶದ ವಿವಿಧ ಆಹಾರ ಪದಾರ್ಥಗಳನ್ನು ಇಲ್ಲಿ ತಯಾರಿಸಿದ್ದಾರೆ. ಆಟ, ಪಾಠದ ಜತೆ ಇದೂ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳ ಮುಂದಿನ ಜೀವನಕ್ಕೂ ಸಹಾಯವಾಗಲಿದೆ ಎಂದು ಹೇಳಿದರು.
    ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಮಾತನಾಡಿ, ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಸುಮಾರು 60ಕ್ಕೂ ಹೆಚ್ಚು ಸ್ಟಾಲ್ ಹಾಕಲಾಗಿದೆ ಎಂದು ತಿಳಿಸಿದರು.
    ಪಿಯು ಕಾಲೇಜಿನ ಪ್ರಾಚಾರ್ಯ ರಮೇಶ್ ದೂಪದಹಳ್ಳಿ ಇದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಕನ್ನಿಕಾ ಸಾನ್ವಿ, ಸುಮಾ ನಂಜುಂಡಸ್ವಾಮಿ ತೀರ್ಪುಗಾರರಾಗಿ ಭಾಗವಹಿಸಿದ್ದರು.
    ದಿನವಿಡೀ ಪುಸ್ತಕಗಳನ್ನು ಹೊತ್ತು ತರುತ್ತಿದ್ದವಿದ್ಯಾರ್ಥಿನಿಯರು ಗುರುವಾರ ಅಡುಗೆ ಸಾಮಗ್ರಿಗಳೊಂದಿಗೆಬಂದು ಆಹಾರ ತಯಾರಿಕೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ರೊಟ್ಟಿ, ಮುದ್ದೆ,ಜಾಮೂನು ಸೇರಿ ತರಹೇವಾರಿ ಅಡುಗೆಗಳು ಘಮಘಮಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts