More

    ರಿಪ್ಪನ್‌ಪೇಟೆಯಲ್ಲಿ ಭಾರಿ ಮಳೆ: ಮನೆಗೋಡೆ ಕುಸಿದು ಮೂವರಿಗೆ ಗಾಯ

    ರಿಪ್ಪನ್‌ಪೇಟೆ: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಒಂದು ಗಂಟೆಗಳ ಕಾಲ ಕಂಡು ಕೇಳರಿಯದಂತಹ ಗುಡುಗು, ಸಿಡಿಲ ಆರ್ಭಟದೊಂದಿಗೆ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ಚರಂಡಿಗಳೆಲ್ಲ ತುಂಬಿ ರಸ್ತೆ ತುಂಬ ನೀರು ಹರಿದು ಅಂಗಡಿ ಮುಂಗಟ್ಟು, ಮನೆಗಳಿಗೆಲ್ಲ ನುಗ್ಗಿತ್ತು.
    ದಿಢೀರ್ ಸುರಿದ ಭಾರಿ ಮಳೆಯಿಂದಾಗಿ ವಾಸದ ಮನೆಯ ಗೋಡೆ ಕುಸಿದು ಮೂವರು ಗಾಯಗೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ ವೀರಾವತಿ (38), ಹರ್ಷವರ್ಧನ(9) ಹಾಗೂ ತೇಜಸ್ವಿ (12) ಗಂಭೀರ ಗಾಯಗೊಂಡಿದ್ದಾರೆ. ಜತೆಗೆ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆದಲಗುದ್ದೆ ಗ್ರಾಮದ ಗೌರಮ್ಮ ಅವರ ವಾಸದಮನೆ ಗೋಡೆ ಬಿದಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.
    ಪಟ್ಟಣದ ವಿನಾಯಕ ವೃತ್ತದಲ್ಲಿನ ತೀರ್ಥಹಳ್ಳಿ ರಸ್ತೆ, ಹೊಸನಗರ ರಸ್ತೆ, ಶ್ರೀರಾಮನಗರ, ವಿನಾಯಕನಗರ, ಶಬರೀಶನಗರ, ಸಾಗರ ರಸ್ತೆ, ದೂರವಾಣಿ, ಅಂಚೆ ಕಚೇರಿ, ಎಸ್‌ಬಿಐ ಶಾಖೆ ಬಳಿ, ನಾಡಕಚೇರಿ, ಪೊಲೀಸ್ ಠಾಣೆಯ ಎದುರು ನೀರು ತುಂಬಿ ಕೆರೆಯಂತಾಗಿತ್ತು. ಬರುವೆ ಬೆಟ್ಟಿನಕೆರೆ ಚಾನಲ್ ತುಂಬಿ ಉಕ್ಕಿ ಹರಿದ ಪರಿಣಾಮ ಬೆಳಕೋಡು, ಗವಟೂರು, ಹಳಿಯೂರು ಹಾಗೂ ವರನಹೊಂಡ ಬಳಿಯ ತೋಟಕ್ಕೆ, ಗದ್ದೆಗೆ ನೀರು ನುಗ್ಗಿ ಹೊಲ ಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡು ರೈತರು ಭತ್ತದ ನಾಟಿ ಕೊಚ್ಚಿಹೋಗಿದೆ. ಅಡಕೆ ಮರಗಳು ಮುರಿದು ಬಿದ್ದಿವೆ.
    ಶ್ರೀರಾಮನಗರ ಬಳಿಯಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿದೆ. ಅರಸಾಳು, ಬೆಳ್ಳೂರು, ಗವಟೂರು, ಬಾಳೂರು, ಹೆದ್ದಾರಿಪುರ, ಜೇನಿ, ಅರಸಾಳು, ಕೆಂಚನಾಲ, ಹರತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೈತರ ಶುಂಠಿ, ಅಡಕೆ, ಮೆಕ್ಕೆಜೋಳ ಫಸಲು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದ್ದು ಅಡಕೆ ಮರಗಳು ಬುಡ ಸಹಿತ ಉರುಳಿ ಬಿದ್ದಿವೆ, ಹೊಳೆ, ಹಳ್ಳಗಳ ಇಕ್ಕೆಲಗಳಲ್ಲಿರುವ ಜಮೀನುಗಳಲ್ಲಿ ಮರಳು ತುಂಬಿದೆ. 150 ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದೆ ಎಂದು ಕೃಷಿ ಅಧಿಕಾರಿ ಶಾಂತಮೂರ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts