More

    ರಾಸಾಯನಿಕ ರಹಿತ ಸೋಂಕು ನಿವಾರಕ ಹುಬ್ಬಳ್ಳಿಯಲ್ಲೇ ಸಿದ್ಧ

    ಹುಬ್ಬಳ್ಳಿ: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕರೊನಾ ಸೋಂಕು ಹರಡದಂತೆ ತಡೆಯಲು ಡಿಸ್​ಇನ್​ಫೆಕ್ಷನ್ (ಸೋಂಕುಗಳೆತ) ಸಲುವಾಗಿ ರಾಸಾಯನಿಕ ಸಿಂಪಡಿಸುವುದು ಹಾನಿಕಾರಕ. ಆದರೆ, ಜೈವಿಕ ವಸ್ತುಗಳಿಂದ ತಯಾರಿಸಿದ ದ್ರಾವಣ ಬಳಸಬಹುದು. ಹುಬ್ಬಳ್ಳಿಯವರಾದ ಋತ್ವಿಕ್ ಸುಬ್ರಮಣ್ಯ ಅವರು ‘ನೀಮ್ ಟೆಕ್’ ಎಂಬ ಸೋಂಕು ನಿವಾರಕ ಸಿದ್ಧಪಡಿಸಿದ್ದು, ಜನಮನ್ನಣೆ ಗಳಿಸುತ್ತಿದೆ. ಯಾವುದೇ ಹಾನಿಯಾಗದಂತೆ ಸೋಂಕು ಕಳೆಯುವ ಹಾಗೂ ಆರೋಗ್ಯ ವೃದ್ಧಿಸುವ ನೀಮ್ ಟೆಕ್, ಭಾರತೀಯ ಪರಂಪರೆಯಲ್ಲಿ ಸೋಂಕು ನಿವಾರಕ ಎಂದೇ ಕರೆಯಲ್ಪಡುವ ಬೇವು ಬಳಸಿ ತಯಾರಿಸಲಾಗಿದೆ.

    ಮನೆ, ಕಚೇರಿ, ಅಪಾರ್ಟ್​ವೆುಂಟ್, ಗೋದಾಮು, ರೆಸ್ಟೋರೆಂಟ್ ಮುಂತಾದ ಕಡೆಗಳಲ್ಲಿ ಈ ನೀಮ್ ಟೆಕ್ ಸಿಂಪಡಿಸಿದರೆ 15 ದಿನಗಳವರೆಗೆ ಆ ಸ್ಥಳವನ್ನು ಸೋಂಕು ಮುಕ್ತಗೊಳಿಸುತ್ತದೆ. ಮನೆಗಳನ್ನು 30 ದಿನಗಳವರೆಗೆ ವೈರಸ್ ಹಾವಳಿಯಿಂದ ದೂರ ಇಡಬಹುದು. ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ. ಈ ಆರ್ಗ್ಯಾನಿಕ್ ಮಿಶ್ರಣದ ಸಿಂಪಡಣೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ದೇಹದ ಮೇಲೆ ಬಿದ್ದರೂ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಋತ್ವಿಕ್. ಇದು ನ್ಯಾಷನಲ್ ಅಕ್ರಿಡೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬರೇಶನ್ ಲ್ಯಾಬರೋಟರಿ (ಎನ್​ಎಬಿಎಲ್ )ಯಿಂದ ಪರೀಕ್ಷೆಗೊಳಪಟ್ಟಿದ್ದು, ಪ್ರಮಾಣೀಕೃತ ಸಿಂಪಡಣೆಯಾಗಿದೆ. ದೇಶದಲ್ಲಿ ಹೇರಳವಾಗಿ ಸಿಗುವ ಬೇವು ಬಳಸಿ ಸುರಕ್ಷಿತ ಸೋಂಕು ನಿವಾರಕ ತಯಾರಿಸಬಹುದು. ಇದು ಮೇಕ್ ಇನ್ ಇಂಡಿಯಾ ಘೋಷಣೆಗೂ ಪೂರಕವಾಗಿದೆ ಎಂಬುದು ಅವರ ಅಭಿಪ್ರಾಯ. ಋತ್ವಿಕ್ ಸಂಪರ್ಕ ಸಂಖ್ಯೆ- 9742198353.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts