More

    ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳಿಗೆ ಕಡಿವಾಣ ಹಾಕಿ

    ಗೌರಿಬಿದನೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಿನಿ ವಿಧಾನಸೌಧ ಬಳಿ ನಿತ್ಯ ಸರಣಿ ಅಪಘಾತಗಳು ಹೆಚ್ಚಾಗುತ್ತಿದ್ದು, ಕಡಿವಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಿನಿವಿಧಾನಸೌಧ ಬಳಿ ರೈತ ಸಂಘ, ಹಸಿರುಸೇನೆ ಹಾಗೂ ಜಯಕರ್ನಾಟಕ ಸಂಘಟನೆ ಸೋಮವಾರ ಪ್ರತಿಭಟನೆ ನಡೆಸಿದವು.

    ಎಲ್ಲ ಇಲಾಖೆಗಳ ಕಚೇರಿ ಒಂದೇ ಸೂರಿನಡಿ ಇರುವಂತೆ ನಗರದ ಹೊರವಲಯದಲ್ಲಿ ಮಿನಿವಿಧಾನಸೌಧ ನಿರ್ಮಿಸಿರುವುದು ಸ್ವಾಗತಾರ್ಹ. ಅದರೆ ನಿತ್ಯ ಸರಣಿ ಅಪಘಾತಗಳು ನಡೆಯುತ್ತಿವೆ. ಹಲವರು ಪ್ರಾಣ ಕಳೆದುಕೊಂಡಿದ್ದರೆ, ಕೆಲವರು ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರುತ್ತಿದ್ದಾರೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾ ರೈತಸಂಘ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ್ ಒತ್ತಾಯಿಸಿದರು.

    ಅಪಘಾತಗಳಿಗೆ ಕಡಿವಾಣ ಹಾಕಲು ಹೆದ್ದಾರಿಯಲ್ಲಿ ಹಂಪ್‌ಗಳನ್ನು ನಿರ್ಮಿಸಬೇಕು, ವೇಗದೂತ ವಾಹನಗಳಿಗೆ ವೇಗ ಮಿತಗೊಳಿಸಿ, ನಾಮಲಕ ಅಳವಡಿಸುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಗುಂಡಾಪುರ ಲೋಕೇಶ್‌ಗೌಡ
    ಮನವಿ ಮಾಡಿದರು.

    ಜಿಲ್ಲಾ ಜಯ ಕರ್ನಾಟಕ ಅಧ್ಯಕ್ಷ ಶ್ರೀನಿವಾಸ್, ಕಾರ್ಯಧ್ಯಕ್ಷ ಜಿ.ಆರ್.ಪ್ರದೀಪ್, ಹಿರೇಬಿದನೂರಿನ ರಾಜಣ್ಣ, ರೈತ ಸಂಘದ ಕಾರ್ಯದರ್ಶಿ ಸನತ್‌ಕುಮಾರ್, ಗೌರವಾಧ್ಯಕ್ಷ ಮುದ್ದರಂಗಪ್ಪ ಚೌಡಪ್ಪ, ಅರುಣ್‌ಕುಮಾರ್, ಹಪಸಂದ್ರ ದೇವು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts