More

    ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ 27, 28ಕ್ಕೆ

    ಚಿತ್ರದುರ್ಗ: ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಎಲ್ಲ ಬಸವಪರ ಸಂಘಟನೆಗಳಿಂದ ಬೆಳಗಾವಿಯಲ್ಲಿ ಜ. 27, 28ರಂದು ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಕೆಂಚವೀರಪ್ಪ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮವಾಗಿ ಪರಿಗಣಿಸಲು ಎಲ್ಲ ಲಕ್ಷಣ ವೀರಶೈವ ಲಿಂಗಾಯತ ಧರ್ಮ ಹೊಂದಿದೆ. ಆದರೆ, ಹಿಂದು ಧರ್ಮದ ಭಾಗವಾಗಿ ಮುಂದುವರಿಯುತ್ತಿದೆ. ಆದ್ದರಿಂದ ಈ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಸಮಾವೇಶ ಆಯೋಜಿಸಲಾಗಿದೆ ಎಂದರು.

    ಕಳೆದ 7 ವರ್ಷಗಳ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾ ಸಂಘ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬಸವ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ಧರ್ಮದ ಹೋರಾಟಕ್ಕಾಗಿ ರಚನೆಯಾಯಿತು. ಈ ಹಿಂದೆ ರಾಜ್ಯ ಸರ್ಕಾರ ಸ್ವತಂತ್ರ ಧರ್ಮವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಪ್ರಸ್ತಾವನೆ ಅಸ್ಪಷ್ಟ ಹಿಂಬರಹದಿಂದ ಹಿಂದಕ್ಕೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.

    ಲಿಂಗಾಯರತನ್ನು ಒಗ್ಗೂಡಿಸಲು ಮಹಾಸಭಾ ಶ್ರಮಿಸುತ್ತಿದ್ದು, ಚಿತ್ರದುರ್ಗದಿಂದ ಸಮುದಾಯದ 150ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ಅಂದಾಜು 1ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

    ಮಹಿಳಾ ಅಧ್ಯಕ್ಷೆ ಶೈಲಜಾ ಬಾಬು, ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಕಟ್ಟಿ, ಸಹ ಸಂಚಾಲಕ ನಂದೀಶ್, ಕಾರ್ಯದರ್ಶಿ ಜಯಶೀಲಾ ವೀರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts