More

    ರಾಷ್ಟ್ರಮಟ್ಟದ ಕಲ್ಪಿತ ಕೋರ್ಟ್ ಸ್ಪರ್ಧೆ 10 ರಿಂದ

    ಬೆಳಗಾವಿ: ಎಂ.ಕೆ. ನಂಬಿಯಾರ್ ಸ್ಮರಣಾರ್ಥ ನಗರದ ಕೆಎಲ್‌ಎಸ್ ಸೊಸೈಟಿ ರಾಜ ಲಖಮಗೌಡ ಕಾನೂನು ಕಾಲೇಜಿನ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಮಾ. 10ರಿಂದ 12ರ ವರೆಗೆ 13ನೇ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕೆಎಲ್‌ಎಸ್ ಸೊಸೈಟಿ ಸದಸ್ಯ ಆರ್.ಎಸ್. ಮುತಾಲಿಕ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 10ರಂದು ಸಂಜೆ 5 ಗಂಟೆೆಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ.ಎಸ್. ಪಾಶ್ಚಾಪುರಿ ಉದ್ಘಾಟಿಸುವರು. ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಎಂ.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸುವರು ಎಂದರು.

    ಗುಜರಾತ, ಉತ್ತರ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ 16 ತಂಡಗಳು ಹಾಗೂ ಕರ್ನಾಟಕದ 4 ರಾಷ್ಟ್ರೀಯ ಕಾನೂನು ಶಾಲೆಗಳನ್ನು ಒಳಗೊಂಡಂತೆ 14 ತಂಡಗಳು ಸ್ಪರ್ಧೆಗೆ ನೋಂದಾಯಿಸಿಕೊಂಡಿವೆ ಎಂದು ಮಾಹಿತಿ ನೀಡಿದರು. ಕೆಎಲ್‌ಎಸ್ ಸೊಸೈಟಿ ಕಾರ್ಯದರ್ಶಿ ಎಸ್.ವಿ. ಗಣಾಚಾರಿ ಮಾತನಾಡಿ, ಸ್ಪರ್ಧೆಯ ಅಂತಿಮ ಸುತ್ತು ಮಾ. 12ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಬಿ. ಕಟ್ಟಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಉತ್ತಮ ವಾದಮಂಡಕ ಹಾಗೂ ವಾದ ಮಂಡಕಿಗೆ ತಲಾ 10 ಸಾವಿರ ರೂ. ಹಾಗೂ ಟ್ರೋಫಿ, ಉತ್ತಮ ಜ್ಞಾಪಕ ಪತ್ರ 10 ಸಾವಿರ ರೂ. ಮತ್ತು ಟ್ರೋಫಿ ಇದೆ. ಇನ್ನುಳಿದಂತೆ ರನ್ನರ್ ಅಪ್ ತಂಡಕ್ಕೆ 20 ಸಾವಿರ ರೂ. ಟ್ರೋಫಿ ಹಾಗೂ ವಿಜೇತ ತಂಡಕ್ಕೆ 30 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು ಎಂದರು. ಮಾ. 12ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಧಾರವಾಡ ಹೈಕೋರ್ಟ್ ಪೀಠದ ನ್ಯಾಯಾಧೀಶ ಅನಿಲ್ ಬಿ. ಕಟ್ಟಿ ಅತಿಥಿಯಾಗಿ ಆಗಮಿಸುವರು ಎಂದರು. ಕಾಲೇಜಿನ ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್, ಸೌಮ್ಯಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts