More

    ರಾಮನ ಜುಲೂಸ್​ನಲ್ಲಿ ಮುಸ್ಲಿಮರು

    ಆಳಂದ: ಜೈ ಭಾರತ ಮಾತಾ ಸೇವಾ ಸಮಿತಿ ಮತ್ತು ಜಯ ಕರ್ನಾಟಕ ಸಂಘಟನೆಯಿಂದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜರ (ನಿರಗುಡಿ ಮುತ್ತ್ಯಾ) ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಶ್ರೀರಾಮ, ಶ್ರೀ ಹನುಮಾನ ದೇವರ ಸ್ತಬ್ಧ ಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮುಸ್ಲಿಮರು ಸೇರಿ ವಿವಿಧ ಸಮಾಜ ಮುಖಂಡರು, ಗಣ್ಯರು ಪಾಲ್ಗೊಂಡರು. ಹೀಗಾಗಿ ಈ ಶೋಭಾಯಾತ್ರೆ ಭಾವೈಕ್ಯತೆ ಸಂದೇಶ ಸಾರಿತು.

    ಪಟ್ಟಣದ ಹೊರವಲಯದ ಮಲ್ಲಿನಾಥ ಮಹಾರಾಜ ಆಶ್ರಮದಿಂದ ಶುರುವಾದ ಮೆರವಣಿಗೆ ಬುದ್ಧ ವಿಹಾರ, ಪ್ರವಾಸಿ ಮಂದಿರ, ದರ್ಗಾ ಬೇಸ್, ರಜವಿ ರಸ್ತೆ, ಸಿದ್ಧಾರ್ಥ ಚೌಕ್, ಹಳೆಯ ತಹಸಿಲ್ ಕಚೇರಿ, ಚಕ್ರಿ ಕಟ್ಟಾ ಮಾರ್ಗವಾಗಿ ಶ್ರೀರಾಮ ಮಾರ್ಕೇಟ್ ಆವರಣಕ್ಕೆ ತಲುಪಿತು. ಮಾರ್ಗದುದ್ದಕ್ಕೂ ಕೇಸರಿ ಧ್ವಜ ರಾರಾಜಿಸಿದವು. ಜೈ ಶ್ರೀರಾಮ್. ಬಜರಂಗಿ ಬಲಿ ಕಿ ಜೈ, ನಿರಗುಡಿ ಮುತ್ತ್ಯಾಜಿ ಕಿ ಜೈಘೋಷ ಮೊಳಗಿದವು. ದಾರಿಯುದ್ದಕ್ಕೂ ಜನರಿಗೆ ಪ್ರಸಾದ, ತಂಪು ಪಾನೀಯ, ನೀರಿನ ವ್ಯವಸ್ಥೆ ಮಾಡಲಾಯಿತು.

    ಇತ್ತೀಚೆಗೆ ಪಟ್ಟಣದ ಲಾಡ್ಲೆ ಮಶಾಕ್ ದಗರ್ಾದಲ್ಲಿನ ಶ್ರೀ ರಾಘವಚೈತನ್ಯ ಲಿಂಗದ ಪೂಜೆ ಸಂಬಂಧ ಹಿಂದು-ಮುಸ್ಲಿಮರ ನಡುವೆ ವಿವಾದ ಭುಗಿಲೆದ್ದಿತ್ತು. ಇಂಥದರಲ್ಲಿ ಶ್ರೀರಾಮನ ಶೋಭಾಯಾತ್ರೆಯಲ್ಲಿ ಮುಸ್ಲಿಮ ಸಮಾಜದ ಅನೇಕರು ಭಾಗಿಯಾಗಿದ್ದು ವಿಶೇಷ ಎನಿಸಿತು. ಭಾರಿ ಸಂಖ್ಯೆಯಲ್ಲಿ ಬಂದೋಬಸ್ತ್​ಲ್ಲಿ ಇದ್ದ ಪೊಲೀಸರು ಇದನ್ನು ಕಂಡು ಖುಷ್ ಆದರು. ನಿರಗುಡಿ ಮುತ್ತ್ಯಾ ಅವರು ಎಲ್ಲ ಸಮಾಜದವರಿಗೆ ಸಾಥ್ ತೆಗೆದುಕೊಂಡು ಸೌಹಾರ್ದತೆ, ಭ್ರಾತೃತ್ವ ಗಟ್ಟಿಗೊಳಿಸುವ ಕೆಲಸ ಮಾಡುತ್ತಿರುವುದು ಈ ಶೋಭಾಯಾತ್ರೆಯಲ್ಲಿ ಎಲ್ಲ ವರ್ಗದವರ ಸಹಭಾಗಿತ್ವಕ್ಕೆ ಕಾರಣವಾಯಿತು.

    ಶ್ರೀ ಪ್ರಕಾಶ ಮುತ್ತ್ಯಾ ಸರಸಂಬಿ, ಲಾಡ್ಲೆ ಮಷಾಕ್ ದಗರ್ಾ ಕಮಿಟಿ ಮುಖ್ಯಸ್ಥ ಆಸೀಫ್ ಅನ್ಸಾರಿ, ಕಲಬುರಗಿ-ಯಾದಗಿರಿ-ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್, ಸೈಯದ್ ಜಾಫರ್ ಹುಸೇನ್ ಸೇಠ್, ಮೋಯಿಸ್ ಕಾರಬಾರಿ, ಕಾಲೇ ಕಲಿವೀರ ಅನ್ಸಾರಿ, ಯೂಸೂಫ್ ಅನ್ಸಾರಿ, ಯುನೂಸ್ ಅನ್ಸಾರಿ, ಅತೀಕ್ ರೆಹಮಾನ, ಅಫ್ಜಲ್ ಅನ್ಸಾರಿ, ಮುಜೀಬ್ ರೆಹಮಾನ, ಗುಂಡುರೆಡ್ಡಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಪ್ರಮುಖರಾದ ಲಿಂಗರಾಜ ಪಾಟೀಲ್, ಗುರುಶರಣಗೌಡ ಪಾಟೀಲ್ ಕೋರಳ್ಳಿ, ಸಂದೇಶ ಪವಾರ, ಮಂಜುನಾಥ ಬಿರಾದಾರ, ಪೀರಪ್ಪ ಯಾತನೂರ, ಬಸಯ್ಯ ಗುತ್ತೇದಾರ್, ಗುರುಸಿದ್ದಪ್ಪ ಬೆನಕನಳ್ಳಿ, ಅನ್ವರ್ ಪಟೇಲ್, ಚನ್ನಪ್ಪ ಹತ್ತರಕಿ, ಆನಂದ ಪಾಟೀಲ್ ಕೋರಳ್ಳಿ, ಶರಣಬಸಪ್ಪ ವಾಗೆ, ಸಿದ್ದು ಪಾಟೀಲ್, ರವೀಂದ್ರ ಕೋರಳ್ಳಿ ಇತರರಿದ್ದರು. ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಮಂಜುನಾಥ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

    ಮಳೆಯಲ್ಲೂ ಉತ್ಸಾಹದ ಹೆಜ್ಜೆ: ಮಧ್ಯಾಹ್ನ 1ಗಂಟೆ ಸುಮಾರಿಗೆ ಅದ್ದೂರಿ ಮೆರವಣಿಗೆ ಆರಂಭವಾಯಿತು. ಬಿಸಿಲಿನ ಮಧ್ಯೆಯೂ ಅಪಾರ ಭಕ್ತರು ಸಂಭ್ರಮದಿಂದ ಹೆಜ್ಜೆ ಹಾಕಿದರು. ಸಂಜೆ 5ರ ಹೊತ್ತಿಗೆ ಮಳೆ ಶುರುವಾಯಿತು. ಇದನ್ನು ಲೆಕ್ಕಿಸಿದ ಜನರು ಉತ್ಸಾಹದಿಂದಲೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ವಾದ್ಯಗಳ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಮಾರ್ಗ ಮಧ್ಯೆ ಜನರು ನಿರಗುಡಿ ಮುತ್ತ್ಯಾ ಅವರ ದರ್ಶನ ಪಡೆದರು.

    ಗಮನ ಸೆಳೆದ ಭಾವಚಿತ್ರಗಳು: 15 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ, ಹನುಮಾನ, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಗಳು ಗಮನ ಸೆಳೆದವು. ಅಲ್ಲದೆ ಡಾ.ಅಂಬೇಡ್ಕರ್, ಬಾಬು ಜಗಜೀವನರಾಮ್, ಮಹಾತ್ಮ ಬಸವಣ್ಣ, ಗೌತಮ ಬುದ್ಧ, ಭಗತಸಿಂಗ್, ಸುಖದೇವ, ರಾಜಗುರು, ಅಷ್ಪಾಕುಲ್ಲಾ ಖಾನ್, ಸದರ್ಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಗಳಿದ್ದವು. ಆಳಂದ ತಾಲೂಕಿನಿಂದ ಪೊಲೀಸ್ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿ ಹುತಾತ್ಮ ಯೋಧರ ಭಾವಚಿತ್ರ, ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ಶಾಸಕರ, ತಾಲೂಕಿನ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಾನ್ ನಾಯಕರ ಭಾವಚಿತ್ರಗಳು ಸಹ ಮೆರವಣಿಗೆಯಲ್ಲಿದ್ದವು.

    ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವ ನೆಲೆಗೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಸ್ತ ಭಾರತೀಯರದ್ದಾಗಿದೆ. ಇಲ್ಲಿ ಜರುಗಿದ ಮೆರವಣಿಗೆ ಮಾದರಿಯಾಗಿದ್ದು, ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ. ಏಳು ವರ್ಷದವರಿದ್ದಾಗ ನಿರಗುಡಿ ಮುತ್ತ್ಯಾ ಅವರು ಮನೆ ಬಿಟ್ಟು ದೇಶ, ಸಮಾಜದ ಉದ್ಧಾರಕ್ಕಾಗಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಜಾತಿ, ಧರ್ಮಕ್ಕಿಂತಲೂ ದೇಶ ಶ್ರೇಷ್ಠ ಎಂಬ ಸಂದೇಶ ಸಾರುತ್ತ ಸಂಚರಿಸುತ್ತಿದ್ದಾರೆ. ಎಲ್ಲ ಧರ್ಮದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.
    | ವೈಜಿನಾಥ ಝಳಕಿ
    ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts