More

    ರಾಮನಗರದಲ್ಲಿ ರಾಮ ಮಂದಿರ ಆಗಿಯೇ ಆಗುತ್ತೆ: ಬೊಮ್ಮಾಯಿ

    ಹಾವೇರಿ: ಕಾಂಗ್ರೆಸ್‌ನವರು ಇಷ್ಟು ದಿನ ಜನರ ತಲೆ ಮೇಲೆ ಹೂ ಇಟ್ಟಿದ್ದರು. ಈಗ ಶಾಶ್ವತವಾಗಿ ಅವರು ಹೂವು ಇಟ್ಟುಕೊಳ್ಳಲಿ. ಇಟ್ಟುಕೊಳ್ಳುವ ಪರಿಸ್ಥಿತಿ ಕೂಡ ಅವರಿಗೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

    ಶಿಗ್ಗಾಂವಿ ಪಟ್ಟಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ತಮ್ಮ ಬಜೆಟ್‌ನಲ್ಲಿ ಏನೇನೂ ಹೇಳಿದ್ದರೋ ಅದನ್ನು ಮಾಡಿಲ್ಲ. ಸಿದ್ದರಾಮಯ್ಯ ಮಾತು ತಪ್ಪಿದ ಮಗ. ಬಜೆಟ್‌ನಲ್ಲಿ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಕೊನೆಗೆ 4 ಕೆ.ಜಿ.ಗೆ ತಂದು ನಿಲ್ಲಿಸಿದರು. ಮತ್ತೆ ಚುನಾವಣೆಗೆ ಬಂದಾಗ 7 ಕೆ.ಜಿ.ಗೆ ಏರಿಸಿದರು. ಇದೇ ರೀತಿ ಯಾಮಾರಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಹೀಗಾಗಿ ಅವರಿಗೆ ಶಾಶ್ವತವಾಗಿ ಹೂವು ಇಡುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

    ರಾಮ ನಗರದಲ್ಲಿ ರಾಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ಮಾಡಿಲ್ಲ. ಅದಕ್ಕೆ ಐತಿಹಾಸಿಕವಾದ ಕುರುಹು ಇದೆ. ಐತಿಹಾಸಿಕ ರಾಮ ಮಂದಿರ, ರಾಮನ ಬೆಟ್ಟ ಇದೆ. ಐಸಿಹಾಸಿಕ ದೇವಸ್ಥಾನ ಹಳೆಯದಾಗಿದೆ. ಆದ್ದರಿಂದ ಹೊಸ ರಾಮ ಮಂದಿರ ನಿರ್ಮಿಸಬೇಕು ಎಂಬುದು ಅಲ್ಲಿಯ ಜನರ ಇಚ್ಛೇ ಕೂಡ ಆಗಿದೆ. ಆದ್ದರಿಂದ ಜನರ ಬೇಡಿಕೆಗೆ ಸ್ಪಂದಿಸಿ ಮಾಡುತ್ತಿದ್ದೇವೆ. ಇದನ್ನು ಯಾರೂ ವಿರೋಧ ಮಾಡಲ್ಲ. ಸಹಕಾರ ಮಾಡುತ್ತಾರೆ ಎಂದುಕೊಂಡಿದ್ದೇನೆ. ಆದರೂ ವಿರೋಧ ಮಾಡುವವರು ಮಾಡಲಿ ನಮದು ಯಾವುದೇ ರೀತಿಯ ತಕರಾರು ಇಲ್ಲ. ಆದರೆ, ಅಲ್ಲಿ ರಾಮ ಮಂದಿರ ಆಗಿಯೇ ಆಗುತ್ತದೆ ಎಂದು ಸ್ಪಷ್ಟಪಡಿಸಿದರು. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ನಡೆದಿರುವ ವಿಚಾರ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts