More

    ರಾಮದುರ್ಗ ಬರಪೀಡಿತ ಘೋಷಣೆ ಮಾಡಲಿ

    ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ತಹಸೀಲ್ದಾರ್‌ಗೆೆ ಮನವಿ
    ರಾಮದುರ್ಗ: ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಮಾಡಿಲ್ಲ. ನೀರಿಲ್ಲದೆ ಬೆಳೆಗಳು ಒಣಗಿವೆ. ಆದ್ದರಿಂದ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವ ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶನಿವಾರ ಪ್ರತಿಭಟಿಸಿ, ತಹಸೀಲ್ದಾರ್ ಬಸವರಾಜ ನಾಗರಾಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
    ಹಸಿರು ಸೇನೆಯ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿ, ಬರ, ನರೆಯಿಂದ ರೈತರು ಮೇಲಿಂದ ಮೇಲೆ ಸಂಕಷ್ಟದ ಸುಳಿಗೆ ಸಿಲುಕುತ್ತಲೇ ಇದ್ದಾರೆ. ಆದರೆ, ಸರ್ಕಾರ ಮಾತ್ರ ಸೂಕ್ತ ಪರಿಹಾರ ನೀಡುತ್ತಿಲ್ಲ. ನೀರಿಲ್ಲದೆ ಎಲ್ಲ ಬೆಳೆಗಳು ನಾಶವಾಗುತ್ತಿವೆ. ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಪ್ರತಿ ಗ್ರಾಮಗಳಲ್ಲೂ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
    ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ಶೀಘ್ರ ನದಿಗೆ ನೀರು ಬಿಡುಗಡೆ ಮಾಡಬೇಕು. ಬೆಳೆಗಳಿಗೆ ಅನುಗುಣವಾಗಿ ಬರ ಪರಿಹಾರ ಘೋಷಿಸಬೇಕು. ಬರ ಇರುವುದರಿಂದ ರೈತರು ಬ್ಯಾಂಕ್‌ನಲ್ಲಿ ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ರೈತರಿಂದ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಬಾರದು ಎಂದು ಬ್ಯಾಂಕ್ ಅಕಾರಿಗಳಿಗೆ ಸೂಚಿಸಬೇಕು. ಮಹಿಳಾ ಸಂಘಗಳಿಗೆ ನೀಡಿದ ಸಾಲ ಮರುಪಾವತಿ ಮಾಡದಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಹಸಿರು ಸೇನೆ ಅಧ್ಯಕ್ಷ ಶಿವಾನಂದ ದೊಡವಾಡ, ಮುಖಂಡರಾದ ನಿಂಗನಗೌಡ ಪಾಟೀಲ, ಮಾರುತಿ ಕುಂಬಾರ, ಅಪ್ಪಣ್ಣ ಗುದಗಿ, ಮಾರುತಿ ಹಾಲೊಳ್ಳಿ, ಯಲ್ಲಪ್ಪ ದೊಡಮನಿ, ಮಹಮ್ಮದ್ ದಾನಕಟಗಿ, ಮಹಾದೇವ ತ್ಯಾವಟಗಿ, ಗೌಡಪ್ಪ ಕಳಸಪ್ಪನವರ, ರಾಜು ಅಣ್ಣಿಗೇರಿ, ನಿಂಗಪ್ಪ ಕೂಗಿ, ಗೌಡಪ್ಪ ಕಲಗೌಡ್ರ, ಶೇಖರ ಕಟ್ಟಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts