More

    ರಾಜ್ಯ ಮಟ್ಟದ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಸುಳ್ಯ, ದುಧನಿಕರ್ ಆಯ್ಕೆ

    ಕಲಬುರಗಿ: ಒಂಬತ್ತು ವರ್ಷಗಳಿಂದ ಕಲಬುರಗಿಯ ರಂಗಸಂಗಮ ಕಲಾ ವೇದಿಕೆ ಕೊಡಮಾಡುತ್ತಿರುವ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಹಿರಿಯ ರಂಗಕರ್ಮಿ, ರಂಗಮಾಂತ್ರಿಕ ಜೀವನರಾಂ ಸುಳ್ಯ ಮತ್ತು ಇದೇ ಮೊದಲ ಸಲ ಕೊಡುತ್ತಿರುವ ಸುಭದ್ರಮ್ಮ ಜಂಗಮಶೆಟ್ಟಿ ರಂಗಪ್ರಶಸ್ತಿಗೆ ವೃತ್ತಿ ರಂಗಭೂಮಿ ನಟಿ ಶೈಲಜಾ ದುಧನಿಕರ್ ಆಯ್ಕೆಯಾಗಿದ್ದಾರೆ.

    ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ಟರ್ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯರಾದ ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು, ಶಾಂತಾ ಕುಲಕರ್ಣಿ, ಸಾಹಿತಿ ಬಿ.ಎಚ್. ನಿರಗುಡಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್, ರಂಗಾಯಣ ನಿರ್ಶದೇಕ ಪ್ರಭಾಕರ ಜೋಶಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

    ನೀನಾಸಂ ಪದವೀಧರರಾಗಿರುವ ಜೀವನರಾಂ ಸುಳ್ಯ ಅವರು ಮಕ್ಕಳ ರಂಗಭೂಮಿ, ಜಾನಪದ, ಬೀದಿ ನಾಟಕ ಸೇರಿ ನೂರಾರು ನಾಟಕಗಳನ್ನು ನಿರ್ದೇಶಿಸಿ ನಾಡಿನಾದ್ಯಂತ ಪ್ರದರ್ಶಿಸಿದ್ದಾರೆ. ಮಾತೋಶ್ರೀ ಸುಭದ್ರಮ್ಮ ಜಂಗಮಶೆಟ್ಟಿ ಸ್ಮರಣಾರ್ಥ ಪ್ರಥಮ ರಂಗ ಪ್ರಶಸ್ತಿಗೆ ಆಯ್ಕೆಯಾದ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಮೂಲದ ಶೈಲಜಾ ದುಧನಿಕರ್ ಹಲವಾರು ವೃತ್ತಿ ಕಂಪನಿಗಳ ನೂರಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

    18ರಂದು ಪ್ರದಾನ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ಆಯ್ಕೆಯಾದ ಕಲಾವಿದರಿಗೆ ತಲಾ 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಡಾ.ಸುಜಾತಾತಿಳಿಸಿದ್ದಾರೆ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts