More

    ರಾಜ್ಯದ 5 ಮಹಾ ನಗರಗಳ ಮಟ್ಟಕ್ಕೆ ಕಲಬುರಗಿ ಸೇರಿಸುವ ಗುರಿ

    ವಿಜಯವಾಣಿ ಸುದ್ದಿಜಾಲ ಕಲಬುರಗಿ

    ಕಲಬುರಗಿ ಮಹಾನಗರವನ್ನು ಅಭಿವೃದ್ಧಿ ಪಡಿಸುವ ಮೂಲಕ ರಾಜ್ಯದ 5 ಟಾಪ್ ಮಹಾನಗರಗಳ ಸಾಲಿಗೆ ಕೊಂಡೊಯ್ಯಲಾಗುವ ಗುರಿ ಹೊಂದಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರು ಹೇಳಿದರು.
    ಗುರುವಾರ ನಗರದಲ್ಲಿ ನೂತನವಾಗಿ ಅಳವಡಿಸಿರುವ ಅಲಂಕಾರಿಕಾ ದಾರಿ ದೀಪಗಳ ಕಂಬಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
    ಕಲಬುರಗಿ ಮಹಾನಗರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸೌಂದರ್ಯೀಕರಣಕ್ಕಾಗಿ ಅಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು
    60 ಕೋಟಿ ರೂ. ವೆಚ್ಚದಲ್ಲಿ ನಗರದ ಎಲ್ಲಾ ವಿದ್ಯುತ್ ದೀಪ ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮ್ಯಾನೇಜ್ಮೆಂಟ್ ಕಮಾಂಡಿಂಗ್ ಸೆಂಟರ್ ತೆರೆಯಲಾಗುತ್ತಿದ್ದು ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.

    ಕಲಬುರಗಿ ಮಹಾ ನಗರ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ ಪಾಟೀಲ್ ಮಾತನಾಡಿ, ಪಾಲಿಕೆಯ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು.

    ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ 80 ಲಕ್ಷ ರೂ. ಹಾಗೂ ಅನ್ನಪೂರ್ಣ ಕ್ರಾಸ್ ನಿಂದ ಬಿಲಗುಂಧಿ ವೃತ್ತದವರೆಗೆ 118 ಲಕ್ಷ ರೂ. ಸೇರಿ ಒಟ್ಟು 198 ಲಕ್ಷ ರೂಪಾಯಿ ವೆಚ್ಚದ ಅಲಂಕಾರಿಕಾ ದಾರಿ ದೀಪಗಳಿಗೆ ಚಾಲನೆ ನೀಡಲಾಯಿತು.

    80 ಲಕ್ಷ ರೂಪಾಯಿ ವೆಚ್ಚದಲ್ಲಿ 61 ಕಂಬಗಳು,122 ಎಲ್.ಇ.ಡಿ.ಬೀದಿ ದೀಪಗಳನ್ನು ಅಳವಡಿಸಲಾಗಿದೆ. 118 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 71 ವಿದ್ಯುತ್ ಕಂಬಗಳು ಹಾಗೂ 142 ಎಲ್.ಇ.ಡಿ.ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಪರ ಆಯುಕ್ತ ರಾದ ಗರಿಮಾ ಪನ್ವಾರ,ಕಲಬುರಗಿ ಮಹಾ ನಗರ ಪಾಲಿಕೆ ಉಪ ಆಯುಕ್ತ ( ಅಭಿವೃದ್ಧಿ) ಆರ್.ಪಿ.ಜಾಧವ, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಶಿವನಗೌಡ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಶಿಕಲಾ ಪಾಟೀಲ್,ಸಹಾಯಕ ಇಂಜಿನಿಯರ್ ಬಸವರಾಜ ಮಲ್ಕಾಪುರ, ಪಾಲಿಕೆ ಸದಸ್ಯರಾದ ವಿಶಾಲ ದಗಿ೯ ಹಾಗೂ ಮಲ್ಲು ಉದನೂರು, ಸೇವಲಾನಿ, ರವಿ ಹಾಗರಗಿ, ಅಪ್ಪು ಕಣಕಿ,ಬಸವರಾಜ, ಮಹೇಶ್ ರೆಡ್ಡಿ ಸೇರಿದಂತೆ ಜನಪ್ರತಿನಿಧಿಗಳು, ಸದಸ್ಯರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts