More

    ರಾಜಗೋಪುರ ನಿರ್ಮಾಣ ಕಾಮಗಾರಿ ಚುರುಕು

    ಶೃಂಗೇರಿ: ಮಹಾಕುಂಭಾಭಿಷೇಕ ಪ್ರಯುಕ್ತ ಶ್ರೀ ಮಲಹಾನಿಕರೇಶ್ವರ ದೇವಾಲಯದ ಪ್ರವೇಶದ್ವಾರ ಮತ್ತು ರಾಜಗೋಪುರ ಕಾಮಗಾರಿ ಭರದಿಂದ ನಡೆಸಲಾಗುತ್ತಿದೆ.  ಫೆ.12ರಂದು ಬೆಟ್ಟದ ಶ್ರೀ ಭವಾನೀಮಲಹಾನಿಕರೇಶ್ವರ ಸ್ವಾಮಿ ಮಹಾಕುಂಭಾಭಿಷೇಕ ನೆರವೇರಲಿದೆ. ಶ್ರೀ ಶಾರದಾ ಪೀಠದಿಂದ ಮೂರು ಕೋಟಿ ರೂ. ವೆಚ್ಚದಲ್ಲಿ 70 ಅಡಿ ಎತ್ತರದ ರಾಜಗೋಪುರ ನಿರ್ವಿುಸಲಾಗುತ್ತಿದೆ.

    2022ರ ಏಪ್ರಿಲ್​ನಲ್ಲಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ರಾಜಗೋಪುರದ ಶಿಲಾನ್ಯಾಸ ನೆರವೇರಿಸಿದ್ದರು. ತಮಿಳುನಾಡಿನ ಸ್ಥಪತಿ ಶಂಕರ ನೇತೃತ್ವದ ತಂಡ ಕಾಮಗಾರಿ ನಡೆಸುತ್ತಿದೆ. ಮನೋಹರವಾದ ಮಠದ ಎದುರು ಇರುವ ರಾಜಗೋಪುರದ ಮಾದರಿಯಲ್ಲಿ ಬೆಟ್ಟದ ರಾಜಗೋಪುರ ನಿರ್ಮಾಣ ಮಾಡುತ್ತಿದ್ದು ಪ್ರವಾಸಿಗರನ್ನು ದೂರದಿಂದಲೇ ಸ್ವಾಗತಿಸಲಿದೆ. ಶಾರದಾ ಪೀಠದಲ್ಲಿ ಶಾರದಾಂಬಾ ದೇಗುಲ, ತೋರಣ ಗಣಪತಿ, ಶ್ರೀ ಶಂಕರಾಚಾರ್ಯ ದೇಗುಲಗಳು ಸ್ವರ್ಣಗೋಪುರಗಳಿಂದ ಕಂಗೊಳಿಸುತ್ತಿವೆ. ಶೃಂಗೇರಿಗೆ ವರ್ಷದಲ್ಲಿ 40ರಿಂದ 50 ಲಕ್ಷ ಭಕ್ತರು ಬರುತ್ತಿದ್ದು, ರಾಜಗೋಪುರ ಕುಂಭಾಭಿಷೇಕಕ್ಕೆ ಜನಸಾಗರ ಹರಿದು ಬರಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts