More

    ರಾಗಿ ಖರೀದಿ ನೋಂದಣಿ ಸ್ಥಗಿತಕ್ಕೆ ರೈತರ ವಿರೋಧ, ತಾಲೂಕು ಕಚೇರಿ ಎದುರು ಪ್ರತಿಭಟನೆ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ತಹಸೀಲ್ದಾರ್

    ದೊಡ್ಡಬಳ್ಳಾಪುರ: ರೈತರ ಕಣ್ಣೀರು ಒರೆಸಲಷ್ಟೇ ಸರ್ಕಾರ ಬೆಂಬಲ ಬೆಲೆ ೋಷಿಸಿದೆ. ಆದರೆ, ರಾಗಿ ಖರೀದಿ ನೋಂದಣಿಯನ್ನು ಸರ್ಕಾರ ನಿಲ್ಲಿಸಿರುವುದನ್ನು ಗಮನಿಸಿದಾಗ ಇದು ವಾಸ್ತವವೇ ಎಂಬ ಅನುಮಾನ ಮೂಡುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ ಆರೋಪಿಸಿದರು.

    ರಾಗಿ ಖರೀದಿ ನೋಂದಣಿಯನ್ನು ಸ್ಥಗಿತಗೊಳಿಸಿರುವ ಸರ್ಕಾರದ ನಿಲುವನ್ನು ಖಂಡಿಸಿ ತಾಲೂಕು ಕಚೇರಿಗೆ ಬೀಗ ಜಡಿದು ಮಂಗಳವಾರ ಆರಂಭಿಸಿದ್ದ ಅಹೋರಾತ್ರಿ ಪ್ರತಿಭಟನೆಯಲ್ಲಿ ಮಾತನಾಡಿದರು.

    ಖರೀದಿ ಕೇಂದ್ರಗಳ ಮೂಲಕ ಎಕರೆಗೆ 10 ಕ್ವಿಂಟಾಲ್ ರಾಗಿ ಖರೀದಿ ಮಾಡುವುದಾಗಿ ಹೇಳಿರುವ ಸರ್ಕಾರ ಏಕಾಏಕಿ ರಾಜ್ಯಾದ್ಯಂತ ಖರೀದಿ ನೋಂದಣಿಯನ್ನು ಸ್ಥಗಿತಗೊಳಿಸಿದೆ. ಮಾರ್ಚ್ 31ರವರೆಗೆ ರಾಗಿ ಖರೀದಿ ನೋಂದಣಿ ಎಂದು ಹೇಳಿ, ಇದೀಗ ಅದಕ್ಕೆ ಸರ್ಕಾರವೇ ತಿಲಾಂಜಲಿ ಇಟ್ಟಿದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡುತ್ತೀರೋ ಇಲ್ಲವೋ? ರೈತರ ಸಮಾಧಿ ಕಟ್ಟಿ ಗಣರಾಜ್ಯೋತ್ಸವ ಆಚರಿಸುತ್ತೀರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

    14 ರೈತ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕಿದ್ದ ಸರ್ಕಾರ ಕೇವಲ 5 ಉತ್ಪನ್ನಗಳಿಗೆ ಇದನ್ನು ಸೀಮಿತಗೊಳಿಸಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸ್ಥಳದಲ್ಲೇ ಮಧ್ಯಾಹ್ನದ ಊಟ ಮಾಡಿದ ರೈತರು ಪ್ರತಿಭಟನೆ ಮುಂದುವರಿಸಿದ್ದರು.

    ಅಧಿಕಾರಿಗಳ ಜತೆ ಚರ್ಚಿಸುವೆ: ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಮೋಹನಕುಮಾರಿ ಅವರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಗುರುವಾರ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸಮ್ಮತಿಸಿದ ರೈತರು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts