More

    ರಾಖಿ ತೆಗೆಸಿದ್ದಕ್ಕೆ ಆಕ್ರೋಶ

    ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿ(ರಕ್ಷಾಬಂಧನ)ಯನ್ನು ಸಂಸ್ಥೆಯವರು ತ್ತಾಯಪೂರ್ವಕವಾಗಿ ತಗೆಸಿರುವುದಕ್ಕೆ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಮುಖಂಡರು ಶಾಲೆಯ ಮುಂಭಾಗದ ಕುಳಿತು ಗುರುವಾರ ಪ್ರತಿಭಟನೆ ನಡೆಸಿದರು.
    ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಲೊಯೋಲ ಶಿಕ್ಷಣ ಸಂಸ್ಥೆಯಿದ್ದು ಈ ಶಾಲೆಯಲ್ಲಿ ಬುಧವಾರ ಧ್ವನಿವರ್ಧಕ ಮೂಲಕ ಶಿಕ್ಷಕರೊಬ್ಬರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಕಟ್ಟಿರುವ ರಾಖಿಯನ್ನು ತೆಗೆದು ತರಗತಿಗೆ ಬರಬೇಕು ಎಂದು ಸೂಚಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿರುವ ರಾಖಿಗಳನ್ನು ತೆಗೆದು ತರಗತಿಗೆ ಹಾಜರಾದರು.
    ವಿಷಯ ತಿಳಿದ ಹಿಂದುಪರ ಸಂಘಟನೆಗಳ ಮುಖಂಡರು ಗುರುವಾರ ಶಾಲೆಯ ದ್ವಾರದ ಬಳಿ ಕುಳಿತು ರಕ್ಷಾಬಂಧನ ಹಬ್ಬ ಆಚರಿಸಿ ಕೈಯಲ್ಲಿ ರಾಖಿ ಕಟ್ಟಿಕೊಂಡು ಶಾಲೆಗೆ ಬಂದ ವಿದ್ಯಾರ್ಥಿಗಳ ರಾಖಿಯನ್ನು ಬಿಚ್ಚಿಸುವ ಮೂಲಕ ಸಂಸ್ಥೆಯವರು ನಮ್ಮ ಧಾರ್ವಿುಕ ಭಾವನೆಗೆ ದಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
    ಈ ವೇಳೆ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್​ಐ ಬಸವರಾಜ ಮಬನೂರ ಸ್ಥಳಾಗಮಿಸಿ ಶಾಲೆಯ ಆಡಳಿತ ಸಮಿತಿಯವರನ್ನು ಹಾಗೂ ಶಿಕ್ಷಣಾಧಿಕಾರಿ ವಿ.ಎಸ್. ಪಟಗಾರ ಅವರನ್ನು ಕರೆಯಿಸಿ ಚರ್ಚೆ ನಡೆಸಿದರು.
    ಈ ವೇಳೆ ಶಿಕ್ಷಣ ಸಂಸ್ಥೆಯ ಜಾನ್ಸನ್ ಪಿಂಟೋ ಹಾಗೂ ಕಾರ್ಯದರ್ಶಿ ಹ್ಯಾರಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಯಾವೂದೆ ಜಾತಿಬೇಧ ಮಾಡುವುದಿಲ್ಲ. ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಯನ್ನು ಉದ್ದೇಶ ಪೂರ್ವಕವಾಗಿ ತೆಗೆಸಿಲ್ಲ. ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಯಾವೂದೆ ರೀತಿಯ ತೊಂದರೆಯಾಗದಂತೆ ಹಾಗೂ ಯಾವುದೇ ಧರ್ಮದ ಭಾವನೆಗಳಿಗೆ ದಕ್ಕೆ ತರುವಂತಹ ಕೆಲಸವನ್ನು ನಾವು ಮಾಡುವುದಿಲ್ಲ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದರು ಅನಂತರ ಪ್ರತಿಭಟನೆ ಕೈ ಬಿಡಲಾಯಿತು.
    ಹಿಂದುಪರ ಸಂಘಟನೆಗಳ ಮುಖಂಡರಾದ ಅಯ್ಯಪ್ಪ ಭಜಂತ್ರಿ,ವಿಶ್ವನಾಥ ನಾಯರ್,ಪ್ರಕಾಶ ಬಡಿಗಿ, ಶಂಕರ ಲಮಾಣಿ, ಸುನೀಲ ಲಮಾಣಿ, ಮಂಜುನಾಥ, ಸಂತೋಷ ತಳವಾರ,ಗಣೇಶ ಶಿರಾಲಿ, ಶ್ರೀಧರ ಉಪ್ಪಾರ, ಮಂಗೇಶ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts