More

    ರಸ್ತೆ ಹಾಳು, ಸಂಚಾರಕ್ಕೆ ಗೋಳು

    ಶಿರಸಿ: ಪ್ರಸಕ್ತ ವರ್ಷದ ಅತಿವೃಷ್ಟಿ ಹಾಗೂ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆಯಾಗದ ಕಾರಣಗಳಿಂದಾಗಿ ಗ್ರಾಮೀಣ ರಸ್ತೆಗಳು ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ತಂದೊಡ್ಡಿವೆ.

    ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಶಿರಸಿ ವಿಭಾಗ ವ್ಯಾಪ್ತಿಯ 6 ತಾಲೂಕುಗಳಲ್ಲಿ ಒಟ್ಟು 7947.30 ಕಿ.ಮೀ. ಗ್ರಾಮೀಣ ರಸ್ತೆಯಿದೆ. ಇದರಲ್ಲಿ 1774.33 ಕಿ.ಮೀ. ರಸ್ತೆ ಡಾಂಬರೀಕರಣಗೊಂಡರೆ, 988.50 ಕಿ.ಮೀ. ರಸ್ತೆ ಖಡೀಕರಣಗೊಂಡಿದೆ. ಉಳಿದಂತೆ 4922.15 ಕಿ.ಮೀ. ಮಣ್ಣಿನ ರಸ್ತೆ ಇದೆ. ಕಳೆದೆರಡು ವರ್ಷಗಳ ಮಳೆಯಿಂದಾಗಿ ಬಹುತೇಕ ಡಾಂಬರು ರಸ್ತೆಗಳು ಹಾಳಾಗಿ ಹೊಂಡಗುಂಡಿಗಳಿಂದ ತುಂಬಿವೆ. ಕಡಿ ರಸ್ತೆಗಳು ಕಚ್ಚಾ ರಸ್ತೆಯಾಗಿ ಮಾರ್ಪಟ್ಟರೆ, ಮಣ್ಣಿನ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ.

    ನಿರ್ವಹಣೆಗೆ ಕರೊನಾ ಅಡ್ಡಿ: ಪ್ರತಿ ವರ್ಷ ಮಳೆಗಾಲ ಅಂತ್ಯದೊಳಗೆ ಆಯಾ ತಾಲೂಕು ವ್ಯಾಪ್ತಿಯ ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ರಚಿಸಿ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಈ ಮೊತ್ತದಲ್ಲಿ ರಸ್ತೆಗಳಲ್ಲಿನ ಹೊಂಡ ತುಂಬುವುದು, ಅಡ್ಡಚರಂಡಿ (ಸಿ.ಡಿ.) ದುರಸ್ತಿ, ಮರುಡಾಂಬರೀಕರಣ, ಮಣ್ಣು ರಸ್ತೆಗಳಿಗೆ ಖಡೀಕರಣ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ, ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ಅನುದಾನ ಬಿಡುಗಡೆಗೆ ಸರ್ಕಾರವೇ ವಿಳಂಬ ಮಾಡುತ್ತಿದೆ. ಇದರಿಂದಾಗಿ ರಸ್ತೆಗಳ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ. ಹಾಳಾಗಿರುವ ರಸ್ತೆಗಳು ರಿಪೇರಿಯಾಗದ್ದರಿಂದ ಗ್ರಾಮೀಣ ಭಾಗದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾಗಿದೆ.

    ಅನುದಾನ ಬಾಕಿ: 2019-20ನೇ ಸಾಲಿನಲ್ಲಿ ರಸ್ತೆ ನಿರ್ವಹಣೆಗೆ ಶಿರಸಿ ವಿಭಾಗ ವ್ಯಾಪ್ತಿಗೆ ಒಟ್ಟು 4.93 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, 1.35 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಇದರಲ್ಲಿ 1.22 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ 3.70 ಕೋಟಿ ರೂ. ಬಾಕಿಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts