More

    ರಸ್ತೆ, ಚರಂಡಿ ಇಲ್ಲದ ಹಿರೇಕೊಪ್ಪ

    ಬೈಲಹೊಂಗಲ : ತಾಲೂಕಿನ ಗ್ರಾಪಂ ವ್ಯಾಪ್ತಿಯ ಹಿರೇಕೊಪ್ಪ ಗ್ರಾಮದ ಪ್ರಮುಖ ರಸ್ತೆಗೆ ಸಮರ್ಪಕ ರಸ್ತೆ ಹಾಗೂ ಚರಂಡಿ ಇಲ್ಲದೆ ಮಳೆ ಹಾಗೂ ಚರಂಡಿ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿರುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

    ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿರುವ ಕಾರಣ ಇಲ್ಲಿನ ಜನರು ಮನೆ ಬಾಗಿಲು ಹಾಗೂ ಕಿಟಕಿ ತೆಗೆಯದ ಪರಿಸ್ಥಿತಿ ಎದುರಾಗಿದೆ. ಚರಂಡಿ ನೀರು ರಸ್ತೆ ತುಂಬೆಲ್ಲ ಹರಿಯುತ್ತಿರುವ ಪರಿಣಾಮ ಮಕ್ಕಳು ಮನೆಯಿಂದ ಹೊರಗೆ ಹೋಗದಂತಾಗಿದೆ. ರಸ್ತೆ ಹಾಗೂ ಚರಂಡಿ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

    ಕಾಯಂ ಪಿಡಿಒ ಇಲ್ಲದ ಕಾರಣ ಇಷ್ಟೊಂದು ಸಮಸ್ಯೆಕ್ಕೆ ಕಾರಣ ಎಂದು ಗ್ರಾಮಸ್ಥರು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮರಕುಂಬಿ ಗ್ರಾಪಂದಲ್ಲಿ 15ನೇ ಹಣಕಾಸು ಯೋಜನೆ ಅಡಿ ಬಂದ ಅನುದಾನದಲ್ಲಿ ಸಾಧ್ಯವಾದಷ್ಟು ಸಿಸಿ ರಸ್ತೆ ನಿರ್ಮಿಸಲಾಗಿದೆ. ಉಳಿದ ರಸ್ತೆ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದೆ. ಜಿಪಂನಿಂದ ಅನುಮತಿ ದೊರಕಿದ ನಂತರ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುವುದು ಎಂದು ಗ್ರಾಪಂ ಸದಸ್ಯ ಶ್ರೀಕಾಂತ ಶಿರಹಟ್ಟಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts