More

    ರಸಋಷಿ ಕುವೆಂಪು ಸಾಹಿತ್ಯ ಸೇವೆ ಅಪಾರ

    ಬೆಳಗಾವಿ : ರಸಋಷಿ ಕುವೆಂಪು ಸಾಹಿತ್ಯದ ವಿವಿಧ ರೂಪಗಳಲ್ಲಿ ಸಾಹಿತ್ಯ ರಚಿಸಿ ಸಾರಸ್ವತ ಲೋಕ ಶ್ರೀಮಂತಗೊಳಿಸಿದ್ದಾರೆ ಎಂದು ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಬಿ. ಕೋಲಕಾರ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ, ಭಾಷಾ ಸಂಘ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರಕವಿ ಕುವೆಂಪು-ಕಂಪು’ ಎಂಬ ವಿಷಯದ ಮೇಲೆ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕರ್ನಾಟಕ ಏಕೀಕರಣ ಮತ್ತು ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಕಟ್ಟಲು ಕುವೆಂಪು ಅವರು ಕಾರಣೀಭೂತರಾಗಿದ್ದಾರೆ. ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ ಮಹಿನೀಯರ ಹೋರಾಟವನ್ನು ವಿದ್ಯಾರ್ಥಿಗಳು ಸ್ಮರಿಸಿಕೊಳ್ಳಬೇಕು. ಜಾಗತೀಕರಣ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ನಶಿಸಿ ಹೋಗುತ್ತಿರುವುದನ್ನು ತಡೆಗಟ್ಟಬೇಕು. ಇಂದಿನ ಯುವಜನತೆ ಕನ್ನಡ ಸಂರಕ್ಷಣೆ ಮಾಡುವ ದೃಢ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

    ಕೆಎಲ್‌ಇ ಸಂಸ್ಥೆಯ ಸದಸ್ಯ ಎಸ್.ಜಿ.ನಂಜಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಜಯಂತಿಗಳಲ್ಲಿ ಪಾಲ್ಗೊಂಡು ಅವರ ಬದುಕು ಮತ್ತು ಬರಹಗಳಲ್ಲಿರುವ ವೈಜ್ಞಾನಿಕ ಮತ್ತು ವೈಚಾರಿಕ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜ್ಯೋತಿ ಕವಳೇಕರ, ಪ್ರೊ. ಎಸ್.ಬಿ. ತಾರದಾಳೆ, ಪ್ರೊ.ಎಸ್.ಬಿ.ಬನ್ನಿಮಟ್ಟಿ, ಪ್ರೊ.ಮಹಾದೇವಿ ಹುಣಶೀಬೀಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts