More

    ರಕ್ತದಾನ ಮಾಡಿದರೆ ದೇಶಕ್ಕೆ ಕೊಡುಗೆ ನೀಡಿದಂತೆ

    ಕಾರವಾರ: ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಹೇಳಿದರು.

    ಡಿಎಚ್​ಒ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಮಾಡುವುದರಿಂದ ಯಾವುದೇ ಕಾಯಿಲೆ ಬರುವುದಿಲ್ಲ ಎಂದರು.

    ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಮಹಾಬಲೇಶ್ವರ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 3,397 ಜನರು ರಕ್ತದಾನ ಮಾಡಿದ್ದಾರೆ ಎಂದರು. ಡಿಎಚ್​ಒ ಡಾ. ಶರದ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೆಡ್​ಕ್ರಾಸ್ ಸೊಸೈಟಿ ಅಧ್ಯಕ್ಷ ವಿ.ಎಂ. ಹೆಗಡೆ, ನಜೀರ್ ಶೇಖ್, ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಇದ್ದರು. ರಕ್ತದಾನಿ ನೂತನ ಜೈನ್, ಶುಭಂ ಕಳಸ ಅವರನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಹೆಗಡೆ ಪ್ರಾರ್ಥಿಸಿದರು, ಬಸವರಾಜ ಕನ್ನಕ್ಕನವರ ನಿರ್ವಹಿಸಿದರು. ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಗಿರೀಶ ಶೆಟ್ಟಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಜನಜಾಗೃತಿ ಜಾಥಾ ನಡೆಯಿತು.

    ರಕ್ತದಾನ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ ಕಡಲಸಿರಿ ಯುವಕ ಸಂಘದಿಂದ ಅಧ್ಯಕ್ಷ ಪ್ರಕಾಶ ಭೋವಿ, ಸದಸ್ಯರಾದ ಗಣೇಶ ಪಂಡಿತ್, ದಿಲ್​ಖುಷ್ ಖಾರ್ವಿ, ತ್ರಿಭುವನ್ ರಕ್ತದಾನ ಮಾಡಿದರು. ರಕ್ತನಿಧಿ ಘಟಕದ ಡಾ. ರಿಜ್ವಾನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts