More

    ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠ ಕಾರ್ಯ

    ನಂದೇಶ್ವರ, ಬೆಳಗಾವಿ: ಪ್ರತಿಯೊಂದು ದಾನಕ್ಕೂ ತನ್ನದೆಯಾದ ಮಹತ್ವವಿದೆ. ಅಪಘಾತದ ಸಂದರ್ಭಗಳಲ್ಲಿ ಒಬ್ಬರ ಜೀವ ಉಳಿಸುವ ರಕ್ತದಾನ ಶ್ರೇಷ್ಠವಾದ ಕಾರ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯಾಧಿಕಾರಿ ಡಾ. ಅನೂಪ ಗಸ್ತಿ ಹೇಳಿದರು. ಸತ್ತಿ ಗ್ರಾಮದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಥಣಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸತ್ತಿ ಹಾಗೂ ಮಾಧ್ಯಮ ಮಿತ್ರರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಆರೋಗ್ಯಕರ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ. ಒಬ್ಬರ ರಕ್ತದಾನದಿಂದ ಸಾವಿನಂಚಿನಲ್ಲಿರುವ ವ್ಯಕ್ತಿ ಬದುಕುಳಿಯುತ್ತಾನೆ. ಅಗತ್ಯ ಸಂದರ್ಭದಲ್ಲಿ ರಕ್ತ ಪಡೆಯುವುದಕ್ಕೆ ಶಿಬಿರಗಳು ಸಹಾಯಕ ಎಂದರು.

    ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಬಿ. ಆರ್. ಪಾಟೀಲ ಮಾತನಾಡಿ ರಕ್ತದಾನ ಸಾಮಾಜಿಕ ಜವಾಬ್ದಾರಿಯಾಗಿ ರೂಪುಗೊಳ್ಳಬೇಕಾಗಿದೆ ಎಂದರು. ಪಿ.ಡಿ.ಒ ಎಂ.ಪಿ.ಗುರವ, ಮುಖಂಡ ಬಿ.ಆರ್.ಪಾಟೀಲ, ಗ್ರಾಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ದಳವಾಯಿ, ಡಾ. ಶ್ರೀಶೈಲ ಚೌಗಲಾ, ಮಹಾಂತೇಶ ವಾಲಿಕಾರ, ಕಾಕಾಸಾಬ ರುದ್ರಗೌಡರ, ಮಲ್ಲಯ್ಯ ಮಠಪತಿ, ಮಹಾದೇವಿ ಗುಳೇದ ಬೆಳಗಾವಿ ವೈದ್ಯಕೀಯ ವಿಜ್ಞಾನದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts