More

    ರಂಜಾನ್ ಸರಳ ಆಚರಣೆ

    ಕಲಬುರಗಿ: ಪವಿತ್ರ ಮತ್ತು ಶ್ರೇಷ್ಠ ಹಬ್ಬ ಇದ್ ಉಲ್ ಫಿತ್ರ್ (ರಮಜಾನ್) ಹಬ್ಬವನ್ನು ಮುಸ್ಲಿಂರು ಸೋಮವಾರ ಕಲಬುರಗಿ ಮತ್ತು ಜಿಲ್ಲೆಯಾದ್ಯಂತ ಸರಳ ಮತ್ತು ಶ್ರದ್ಧಾ ಭಕ್ತಿಯಿಂದ ಅಚರಿಸಿ ಕರೊನಾ ಎಂಬ ಮಹಾಮಾರಿಯನ್ನು ಓಡಿಸು ಎಂದು ಅಲ್ಹಾನಲ್ಲಿ ಪ್ರಾರ್ಥಿಸಿದರು.
    ಕರೊನಾ ಸೋಂಕಿನಿಂದಾಗ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಆಲಿಂಗನ ಮೂಲಕ ಶುಭಾಶಯ ಕೋರುವುದನ್ನು ನಿಷೇಧಿಸಲಾಗಿತ್ತು. ಮುಸ್ಲಿಮರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
    ರಂಜಾನ್ ಹಿನ್ನೆಲೆಯಲ್ಲಿ ತಿಂಗಳ ಕಾಲ ಮುಸ್ಲಿಂರು ಉಪವಾಸ ವೃತ ಆಚರಿಸಿಕೊಂಡು ಬರುತ್ತಾರೆ. ವಿಶೇಷ ಪ್ರಾರ್ಥನೆ ಮತ್ತು ದಾನ ಧರ್ಮ ಮಾಡುವ ಮೂಲಕ ಮುಕ್ತಾಯಗೊಳಿಸುತ್ತಾರೆ. ತಮ್ಮ ಶಕ್ತಿಗನುಸಾರವಾಗಿ ಬಡವರಿಗೆ, ನಿರ್ಗಗತಿಕರಿಗೆ ದಾನ ರೂಪದಲ್ಲಿ ನೀಡುವ ಮೂಲಕ ಜಕಾತ್ ಮಾಡಿದರು.
    ಜೇವರ್ಗಿ , ಆಳಂದ, ಅಫಜಲಪುರ, ಸೇಡಂ, ಚಿಂಚೋಳಿ, ಚಿತ್ತಾಪುರ, ಕಮಲಾಪುರ, ಕಾಳಗಿ, ಯಡ್ರಾಮಿ, ಶಹಾಬಾದ ಮೊದಲಾದ ತಾಲೂಕುಗಳಲ್ಲಿ ಮತ್ತು ವಾಡಿ, ಸುಲೇಪೇಟ, ಇಜೇರಿ, ಮಾಶಾಳ, ಮಾದನಹಿಪ್ಪರಗಾ, ವಿಕೆ ಸಲಗರ, ಅಂದೋಲಾ, ಮುಧೋಳ ಇನ್ನಿತರ ಪಟ್ಟಣಗಳಲ್ಲಿಯೂ ಹಬ್ಬ ಆಚರಿಸಲಾಯಿತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಸೇರಿ ಅನೇಕ ಗಣ್ಯರು ಮುಸ್ಲಿಮರಿಗೆ ಹಬ್ಬದ ಶುಭ ಕೋರಿದರು.
    ಹಬ್ಬದ ವಿಶೇಷವಾಗಿರುವ ಸಿರಕುಂಬಾ (ಹಾಲಿನಿಂದ ತಯಾರಿಸುವ ಸಿಹಿ ಪದಾರ್ಥ) ತಮ್ಮ ಆಪ್ತರಿಗೆ ಇತರರ ಮನೆಗಳಿಗೆ ಹೋಗಿ ಕೊಡುವ ಮೂಲಕ ಸೌಹಾರ್ದತೆಯ ಕೊಂಡಿಯನ್ನು ಗಟ್ಟಿಗೊಳಿಸಿದರು. ಕಲಬುರಗಿ ರಂಜಾನ್, ಸರಳ ಆಚರಣೆ, kalaburagi, Ramanujan is simple celebration

    ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ತಡೆಗಾಗಿ ನಗರದ ಮತ್ತು ಜಿಲ್ಲೆಯಲ್ಲಿರುವ ಎಲ್ಲ ಈದ್ಗಾಗಳ ಬಳಿಯಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ರಂಜಾನ್ ಹಬ್ಬವು ನಾವು ಮಾಡುವ ಕರ್ಮಗಳನ್ನು ಶುದ್ಧವಾಗಿರಬೇಕು, ಮಾಡಿದ ಪಾಪಗಳನ್ನು ತೊಳೆದುಕೊಂಡು ಮತ್ತೇ ಪರಿಶುದ್ಧರಾಗಿ ಜೀವನ ನಡೆಸಲು ಪ್ರೇರಣೆ ನೀಡುವಂತ ಹಬ್ಬವಾಗಿದೆ. ದಾನ ಧರ್ಮ ಮೊದಲಾದವನ್ನು ಮಾಡಿ ತಮ್ಮ ಭಕ್ತಿಯನ್ನು ಅಲ್ಲಾನಲ್ಲಿ ಸಮಪರ್ಿಸುವ ಮೂಲಕ ಮಾದರಿಯಾಗಿ ನಡೆಯುವ ಶಕ್ತಿ ನೀಡಲಿದೆ.

    ಡಾ.ಸಜ್ಜಾದ ನಶೀನ್​ ಸೈಯದ್​ ಷಾ ಖುಸ್ರೋ ಹುಸೇನಿ ಬಾಬಾ ಕೆಬಿಎನ್​ ದರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts